ಹಜಾರಿಬಾಗ್: ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ದೂಧ್ಮಾಟಿಯಾದ ಶಾಲಾ ಶಿಕ್ಷಕ ಮಹದಿಯೋ ಮಹತೋ ಪರಿಸರ ಸಪ್ತಾಹ ಆಂದೋಲನ ಆರಂಭಿಸಿದ್ದಾರೆ.
ಆಂದೋಲನಮದ ವೇಳೆ ಮರಗಳ ರಕ್ಷಣೆಗೆ ಅವುಗಳಿಗೆ ರಾಖಿ ಕಟ್ಟುವಂತೆ ಜನರಲ್ಲಿ ಕೇಳಿಕೊಂಡಿದ್ದಾರೆ.
ಹಜಾರಿಬಾಗ್ನ ನಿವಾಸಿಗಳು ಮರಗಳ ರಕ್ಷಣೆ ಮತ್ತು ಪರಿಸರ ಜಾಗೃತಿಗಾಗಿ ಮಹತೋ ಜೊತೆ ಕೈಜೋಡಿಸಿದ್ದಾರೆ. ಜಾರ್ಖಂಡ್ ಮತ್ತು ಸಮೀಪದ ಇತರ ಗ್ರಾಮಗಳ ಗ್ರಾಮಸ್ಥರು ಹಲವು ಪರಿಸರ ಸ್ನೇಹಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಆಂದೋಲನ ಈ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದಿದೆ.
ಪ್ರತಿ ವರ್ಷ ಅಕ್ಟೋಬರ್ 7ರಂದು ಪರಿಸರ ಉತ್ಸವ ನಡೆಸಲಾಗುತ್ತಿದೆ.
ಪರಿಸರ ಜಾಗೃತಿಗಾಗಿ ಸೈಕಲ್ ರ್ಯಾಲಿ ನಡೆಸಲಾಗಿದ್ದು, ಗ್ರಾಮಸ್ಥರು ಮರಗಳಿಗೆ ಜನಿವಾರ ಕಟ್ಟಿ, ಪೂಜೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.