ನವದೆಹಲಿ: ಹೊಸದಾಗಿ ರೂಪಿಸಿರುವ ಹಣಕಾಸು ನೀತಿ ಸಮಿತಿ ಆರ್ಬಿಐ ಗವರ್ನರ್ ಅರ್ಜಿತ್ ಪಟೇಲ್ ನೇತೃತ್ವದಲ್ಲಿ ನಡೆಸಿದ ನೀತಿ ವಿಮರ್ಶೆಯಲ್ಲಿ ತನ್ನ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಇದರಿಂದ ವಾಹನ ಮತ್ತು ಗೃಹ ಸಾಲ ಅಗ್ಗವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಣಕಾಸು ನೀತಿ ಸಮಿತಿ ಮಂಗಳವಾರ ರೆಪೋ ದರ ಕಡಿತಗೊಳಿಸಿದ್ದು, ರೆಪೋ ದರ 6.25ಗೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ರಿವರ್ಸ್ ರೆಪೋ ದರ 5.75ಗೆ ಹೊಂದಿಸಲಾಗಿದೆ.
ಕನಿಷ್ಠ ಸ್ಥಾಯಿ ಸೌಲಭ್ಯ (ಎಂಎಸ್ಎಫ್) ಮತ್ತು ಬ್ಯಾಂಕ್ ದರವನ್ನು 6.75ಕ್ಕೆ ಹೊಂದಿಕೆ ಮಾಡಲಾಗಿದೆ.
ಸದ್ಯದ ರೆಪೋ ದರ ನವೆಂಬರ್ 2010ರ ನಂತರದ ಅತೀ ಕಡಿಮೆ ರೆಪೋ ದರ ಆಗಿದೆ. ಆರ್ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ 7.6 ಜಿಡಿಪಿ ಉಳಿಸಿಕೊಂಡಿದೆ. ಹಣಕಾಸು ಸಮತಿ ಮಾರ್ಚ್ 2017ರ ವೇಳೆಗೆ ಚಿಲ್ಲರೆ ಹಣದುಬ್ಬರ ಶೇ.5ರಷ್ಟು ಏರಿಕೆಯಾಗುವ ಬಗ್ಗೆ ನಿರೀಕ್ಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.