ನವದೆಹಲಿ: ಐಟಿ ಸಚಿವಾಲಯ ಸೋಮವಾರು ವಾರಣಾಸಿ, ಸಿಲಿಗುರಿ, ಪಾಟ್ನಾ ಸೇರಿದಂತೆ ದೇಶದ ಹಲವು ನಗರಗಳಲ್ಲಿ ವ್ಯಾಪಾರ ಹೊರಗುತ್ತಿಗೆಯ (ಬಿಪಿಒ) 9 ಸಾವಿರ ಸ್ಥಾನಗಳಿಗೆ ಅನುಮೋದನೆ ನೀಡಿದೆ.
ಭಾರತ ಜಾಗತಿಕ ಬಿಪಿಒ ಉದ್ಯಮದಲ್ಲಿ ಶೇ.೩೮ರಷ್ಟು ಪಾಲು ಹೊಂದಿದೆ ಹಾಗೂ ಈ ವಲಯದಲ್ಲಿ ಭಾರೀ ಬೆಳವಣಿಗೆ ಹೊಂದಲು ವೇದಿಕೆ ಸಜ್ಜಾಗಿದೆ ಎಂದು ಬಿಪಿಒ ಅನುಮೋದನೆ ಮಾಡುತ್ತ ಐಟಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಭಾರತದ ಸಾಫ್ಟ್ವೇರ್ ತಂತ್ರಜ್ಞಾನ ಪಾರ್ಕ್ (ಎಸ್ಟಿಪಿಐ) 9,020 ಸ್ಥಾನಗಳೀಗೆ ಪ್ರಧಾನ ಅನುಮೋದನೆ ನೀಡಿದೆ. ಇದರ ಮೂರನೇ ಹಂತದ ಹರಾಜು ಆರಂಭಗೊಂಡಿದ್ದು, ೩ ಸಾವಿರಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಯಲದ ಜಂಟಿ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ.
ಮುಝಫರ್ಪುರ್, ಪಾಟ್ನಾ, ಧುಲೆ, ಉನಾವೋ ಸೇರಿದಂತೆ 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 60 ಸ್ಥಳಗಳಲ್ಲಿ ಸುಮಾರು 50 ಕಂಪೆನಿಗಳು ಬಿಪಿಒ ಕಾರ್ಯಾಚರಣೆ ಪ್ರಾರಂಭಿಸಲಿವೆ.
ಟಿಸಿಎಸ್, ಅಮೇಜಾನ್ ಹರಾಜಿನಲ್ಲಿ ಈವರೆಗೆ ಪಾಲ್ಗೊಂಡ ಅತೀ ದೊಡ್ಡ ಕಂಪೆನಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.