ನವದೆಹಲಿ : ಅಕ್ಟೋಬರ್ 15 ರಿಂದ ಪಾಕಿಸ್ಥಾನದಾದ್ಯಂತ ಎಲ್ಲಾ ಭಾರತೀಯ ಟಿವಿ ಚಾನಲ್ಗಳನ್ನು ನಿಷೇಧಿಸಲು ನಿರ್ಧರಿಸಿದೆ.
ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯಿಂದಾಗಿ ಕಂಗೆಟ್ಟಿರುವ ಪಾಕಿಸ್ಥಾನವು ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗೆ ಸಂಬಂಧ ಹದಗೆಡುತ್ತಿರುವ ಹಿನ್ನಲೆಯಲ್ಲಿ ಕಂಗಾಲಾಗಿರುವ ಪಾಕಿಸ್ಥಾನವು ಅಕ್ಟೋಬರ್ 15 ರಿಂದ ಎಲ್ಲ ಭಾರತೀಯ ಟಿವಿ ಚಾನಲ್ಗಳನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಂಡಿದೆ.
ಪಾಕಿಸ್ಥಾನದಲ್ಲಿ ಭಾರತದ ಯಾವುದೇ ಟಿವಿ ಚಾನಲ್ಗಳನ್ನು ಪ್ರಸಾರ ಮಾಡದಂತೆ ಡೀಲರ್ಗಳಿಗೆ ಪಾಕಿಸ್ಥಾನ ಸರಕಾರದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್ಎ) ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ನಿಯಮವನ್ನು ಉಲ್ಲಂಘಿಸಿ ಭಾರತೀಯ ಟಿವಿ ಚಾನಲ್ಗಳನ್ನು ಪ್ರಸಾರ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದೆ ಎನ್ನಲಾಗಿದೆ.
ಈಗಾಗಲೆ ಪಾಕಿಸ್ಥಾನದಲ್ಲಿ ಎಲ್ಲಾ ಬಾಲಿವುಡ್ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಕಳೆದ ಶುಕ್ರವಾರ ಪಾಕಿಸ್ಥಾನ ಚಿತ್ರಮಂದಿರಗಳ ಮಾಲಕರು ಭಾರತ ಮತ್ತು ಪಾಕ್ ನಡುವಿನ ಸಂಬಂಧಗಳು ಸುಧಾರಿಸುವ ತನಕ ಬಾಲಿವುಡ್ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸಲು ನಿರ್ಧರಿಸಿದ್ದರು.
ಇದೀಗ ಪಾಕಿಸ್ಥಾನ ಸರಕಾರದ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಟಿವಿ ಚಾನಲ್ಗಳನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.