ಢಾಕಾ: ಇಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪರುರುಷರ ನಾಲ್ಕನೇ ಅಂಡರ್-18 ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಫೈನಲ್ನಲ್ಲಿ ಭಾರತ ರೋಚಕ ಜಯ ಸಾಧಿಸಿದೆ.
ಗುರುವಾರ ಪಾಕಿಸ್ಥಾನ ವಿರುದ್ಧ 3-1 ಅಂರತದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ, ಫೈನಲ್ನಲ್ಲಿ ಬಾಂಗ್ಲಾದೆಶ ವಿರುದ್ಧ 5-4ರಂದ ಜಯಿಸಿದೆ.
ಕಳೆದ ಶನಿವಾರ ಬಾಂಗ್ಲಾ ವಿರುದ್ಧದ ಪ್ರಥಮ ಪಂದ್ಯದಲ್ಲಿ 4-5ರಿಂದ ಸೋಲನುಭವಿಸಿದ್ದ ಭಾರತ ಫೈನಲ್ನ್ನು ತಿರುಗೇಟು ನೀಡಿದೆ.
ಮೊದಲಾರ್ಧದಲ್ಲಿ 1-1ರಿಂದ ಸಮಬಲ ಸಾಧಿಸಿದ್ದ ಭಾರತ, ದ್ವಿತೀಯಾರ್ಧದಲ್ಲಿ 3-2ರಿಂದ ಮುನ್ನಡೆ ಸಾಧಿಸಿತ್ತು. ಇದರ 13 ನಿಮಿಷಗಳ ನಂತರ ಪಂದ್ಯ 3-3 ಸಮಬಲ ಪಡೆದುಕೊಂಡಿತು. 89ನೇ ನಿಷಮಿದಲ್ಲಿ 4-4ರಿಂದ ಬಾಂಗ್ಲಾದೇಶ ಡ್ರಾ ಸಾಧಿಸಲು ಪ್ರಯತ್ನಿಸಿದರೆ, ಪಂದ್ಯದ ಕೊನೆಯ 20 ಸೆಕೆಂಡ್ ಅವಧಿಯಲ್ಲಿ ಭಾರತ 5ನೇ ಗೋಲು ಬಾರಿಸಿ ಜಯಭೇರಿಯೆನಿಸಿದೆ.
ಡಿಸೆಂಬರ್ನಲ್ಲಿ ಭಾರತದಲ್ಲಿ ಜೂನಿಯರ್ ವಿಶ್ವಕಪ್ ನಡೆಯಲಿದ್ದು, ಭಾರತದ ಈ ಸಾಧನೆಯಿಂದ ತಂಡ ಧನಾತ್ಮಕವಾಗಿ ಆಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.