×
Home About Us Advertise With s Contact Us

ಮಾ.27 ಗುತ್ತಿಗಾರಿನಲ್ಲಿ ವಿದ್ಯುತ್ ಬಳಕೆದಾರರ ಸಮಾಲೋಚನಾ ಸಭೆ

powerಸುಬ್ರಹ್ಮಣ್ಯ : ಗುತ್ತಿಗಾರು ಪ್ರದೇಶದ ವಿದ್ಯುತ್ ಸಮಸ್ಯೆ ಬಗ್ಗೆ ಹಾಗೂ ಮೆಸ್ಕಾಂ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ಮಾ.27 ರಂದು ಬೆಳಗ್ಗೆ 10:30ಕ್ಕೆ ಗುತ್ತಿಗಾರಿನ ಗಿರಿಜನ ಸಭಾಭವನದಲ್ಲಿ ಗುತ್ತಿಗಾರು ವರ್ತಕ ಸಂಘ, ಯುವಕ ಮಂಡಲ ಗುತ್ತಿಗಾರು ಹಾಗೂ ಭಾರತೀಯ ಕಿಸಾನ್ ಸಂಘ ಮತ್ತು ಜನಹಿತ ವೇದಿಕೆ ಆಶ್ರಯದಲ್ಲಿ ನಡೆಯಲಿದೆ ಎಂದು ಗುತ್ತಿಗಾರು ವರ್ತಕ ಸಂಘದ ಅಧ್ಯಕ್ಷ ವೆಂಕಟ್ರಮಣ ಕೇಂಬ್ರೋಳಿ ತಿಳಿಸಿದ್ದಾರೆ.

ಅವರು ಬುಧವಾರ ಗುತ್ತಿಗಾರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಗುತ್ತಿಗಾರಿನಲ್ಲಿ ಕಳೆದ ಹಲವಾರು ಸಮಯಗಳಿಂದ ಲೋವೋಲ್ಟೇಜ್, ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿರುವ ಕಾರಣದಿಂದ ಗುತ್ತಿಗಾರಿನ ವರ್ತಕರು, ಕೃಷಿಕರು ಹಾಗೂ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸಮಾಲೋಚನೆ ನಡೆಸಲು ಹಾಗೂ ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳು ಆಗಮಿಸಬೇಕು ಎಂದು ಈಗಾಗಲೇ ಮೆಸ್ಕಾಂಗೆ ತಿಳಿಸಲಾಗಿದೆ. ಒಂದು ವೇಳೆ ಸಭೆಗೆ ಆಗಮಿಸದೇ ಇದ್ದಲ್ಲಿ ಗುತ್ತಿಗಾರು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ,ವರ್ತಕ ಸಂಘದ ಕಾರ್ಯದರ್ಶಿ ಬಿ.ಕೆ.ಶ್ರೀಧರ್ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ, ಯುವಕ ಮಂಡಲ ಕೋಶಾಧಿಕಾರಿ ಲೋಕೇಶ್ವರ ಡಿಆರ್ ಉಪಸ್ಥಿತರಿದ್ದರು.

 

Recent News

Back To Top
error: Content is protected !!