ನವದೆಹಲಿ : ಈ ವಾರದಲ್ಲಿ ತೆರೆಕಾಣಲಿರುವ ಖ್ಯಾತ ಕ್ರಿಕೆಟ್ ತಾರೆ ಎಮ್.ಎಸ್. ಧೋನಿ ಜೀವನಾಧಾರಿತ ಚಲನಚಿತ್ರ ಎಂ.ಎಸ್. ಧೋನಿ – ದ ಅನ್ಟೋಲ್ಡ್ ಸ್ಟೋರಿ ಚಲನಚಿತ್ರವನ್ನು ಪಾಕಿಸ್ಥಾನವು ಬಿಡುಗಡೆ ಮಾಡಲು ನಕಾರ ಸೂಚಿಸಿದೆ. ಮಹಾರಾಷ್ಟ್ರದಲ್ಲಿ ಎಮ್ಎನ್ಎಸ್ ಸಂಘಟನೆಯ ಹೇಳಿಕೆಯ ಪರಿಣಾಮವಾಗಿ ಪಾಕಿಸ್ಥಾನ ಚಲನಚಿತ್ರ ಮಂಡಳಿಯು ಎಮ್.ಎಸ್ ಧೋನಿ ಚಿತ್ರವನ್ನು ಬಹಿಷ್ಕರಿಸಲಿದೆ ಎನ್ನಲಾಗಿದೆ.
ಮಾಧ್ಯಮದ ಮೂಲಗಳ ಪ್ರಕಾರ, IMGC Global Entertainment (ಪಾಕಿಸ್ಥಾನ ಮೂಲದ ಚಲನಚಿತ್ರ ವಿತರಕ ಮಂಡಳಿ) ಚಿತ್ರವನ್ನು ಬಿಡುಗಡೆಗೊಳಿಸಲು ಹಿಂದೆ ಸರಿದಿದೆ. ‘ಎರಡು ದೇಶಗಳ ಪ್ರಸ್ತುತ ಒತ್ತಡಗಳ ಮಧ್ಯೆ, ನಾವು ಈ ಚಿತ್ರವನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇವೆ’ ಎಂದು ಮಂಡಳಿಯ ಅಧ್ಯಕ್ಷರು ಹೇಳಿದ್ದಾರೆ.
ಪಾಕಿಸ್ಥಾನವು ಬಾಲಿವುಡ್ ಚಿತ್ರಗಳಿಗೆ 3ನೇ ಅತೀ ದೊಡ್ಡ ಸಾಗರೋತ್ತರ ಮಾರುಕಟ್ಟೆಯಾಗಿದೆ. ಆದರೆ ಪಾಕಿಸ್ಥಾನ ಚಿತ್ರ ಮಂಡಳಿಯ ಈ ನಿರ್ಧಾರದಿಂದ ಎಮ್.ಎಸ್. ಧೋನಿ ಚಿತ್ರದ ಗಲ್ಲಾಪೆಟ್ಟಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಉರಿ ದಾಳಿಯ ನಂತರ ಎಮ್ಎನ್ಎಸ್ ಸಂಘಟನೆಯು, ಪಾಕಿಸ್ಥಾನದ ಕಲಾವಿದರಿಗೆ ಭಾರತ ಬಿಟ್ಟು ಹೋಗಲು ಎಚ್ಚರಿಕೆ ನೀಡಿತ್ತು. ಪಾಕಿಸ್ಥಾನದ ನಟ ಫವಾದ್ ಖಾನ್ ನಟಿಸಿರುವ ‘ಎ ದಿಲ್ ಹೈ ಮುಷ್ಕಿಲ್’ ಹಾಗೂ ನಟಿ ಮಹೀರ ಖಾನ್ ನಟಿಸಿರುವ ’ರಯೀಸ್’ ಚಿತ್ರಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಬಾರದೆಂದು ರಾಜ್ ಠಾಕ್ರೆ ನೇತೃತ್ವದ ಎಮ್ಎನ್ಎಸ್ ಸಂಘಟನೆ ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.