ಮುಂಬಯಿ: ಸುಮಾರು 45 ಸಾವಿರ ಲಕ್ಷಾಧಿಪತಿಗಳು ಹಾಗೂ 28 ಮಂದಿ ಕೋಟ್ಯಾಧಿಪತಿಗಳ ಮನೆಯಾಗಿರುವ ಭಾರತದ ಆರ್ಥಿಕ ರಾಜಧಾನಿ ಮುಂಬಯಿ, ಒಟ್ಟು 820 ಬಿಲಿಯ್ ಡಾಲರ್ ಸಂಪತ್ತು ಹೊಂದಿದ ದೇಶದ ಅತ್ಯಂತ ಶ್ರೀಮಂತ ನಗರ ಎಂದು ವರದಿ ತಿಳಿಸಿದೆ.
ನ್ಯೂ ವರ್ಲ್ಡ್ ವೆಲ್ತ್ ಪ್ರಕಾರ ಮುಂಬಯಿ ನಂತರ ದೆಹಲಿ ದ್ವಿತೀಯ ಹಾಗೂ ಬೆಂಗಳೂರು ತೃತೀಯ ಸ್ಥಾನಗಳಲ್ಲಿವೆ. 22 ಸಾವಿರ ಲಕ್ಷಾಧಿಪತಿಗಳು ಮತ್ತ 18 ಕೋಟ್ಯಾಧಿಪತಿಗಳ ನೆಲೆಯಾಗಿರುವ ದೆಹಲಿಯ ಒಟ್ಟು ಸಂಪತ್ತು 450 ಬಿಲಿಯನ್ ಡಾಲರ್. ಇದೇ ವೇಳೆ 7,500 ಲಕ್ಷಾಧಿಪತಿಗಳು ಮತ್ತು 8 ಮಂದಿ ಕೋಟ್ಯಾಧಿಪತಿಗಳೊಂದಿಗೆ ಬೆಂಗಳೂರು 320 ಬಿಲಿಯನ್ ಡಾಲರ್ ಸಂಪತ್ತು ಹೊಂದಿದೆ.
ವರದಿ ಪ್ರಕಾರ ಕಳೆದ ಜೂನ್ 2016ರ ವರೆಗೆ ದೇಶದ ಒಟ್ಟು ಸಂಪತ್ತು 5.6 ಟ್ರಿಲಿಯನ್ ಡಾಲರ್. ಭಾರತ 2,64,000 ಲಕ್ಷಾಧಿಪತಿಗಳು ಮತ್ತು 95 ಕೋಟ್ಯಾಧಿಪತಿಗಳಿಗೆ ಮನೆಯಾಗಿದೆ.
ಈ ಒಟ್ಟು ಸಂಪತ್ತು ಎಲ್ಲ ವ್ಯಕ್ತಿಗಳ ಖಾಸಗಿ ಸಂಪತ್ತನ್ನು ಸೂಚಿಸುತ್ತದೆ. ವ್ಯಕ್ತಿಗಳ ಖಾಸಗಿ ಸಂಪತ್ತು ಅವರ ನಿವ್ವಳ ಆಸ್ತಿಯಾಗಿದ್ದು, ಅವರ ಆಸ್ತಿ, ನಗದು ಆಸ್ತಿ, ಇಕ್ವಿಟಿ, ವ್ಯಾಪಾರದ ಬಡ್ಡಿದರವನ್ನು ಹೊಂದಿದೆ. ಇದು ಸರ್ಕಾರಿ ಬಂಡವಾಳವನ್ನೂ ಹೊಂದಿವೆ ಎಂದು ವರದಿ ತಿಳಿಸಿದೆ.
ಸೂರತ್, ಅಹ್ಮದಾಬಾದ್, ವಿಶಾಖಪಟ್ಟಂ, ಗೋವಾ, ಚಂಡೀಗಢ,. ಜೈಪುರ್ ಮತ್ತು ವಡೋದರಾ ಇತರ ನಗರಗಳಾಗಿವೆ.
ಮುಂದಿನ ದಶಕಗಳಲ್ಲಿ ಭಾರತ ಸ್ಥಳೀಯ ಆರ್ಥಿಕ ಸೇವೆಗಳು, ಐಟಿ, ವಸತಿ, ಆರೋಗ್ಯ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಸದೃಢ ಬೆಳವಣಿಗೆ ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.