ಮಂಗಳೂರು: ಭಾರತದ ಗುಣಮಟ್ಟ ಮಂಡಳಿ ಕರ್ನಾಟಕದ ಮೂರು ಸ್ಥಳಿಯ ನಗರ ಸಂಸ್ಥೆಗಳಾದ ಮಂಗಳೂರು, ಉಡುಪಿ, ಮೈಸೂರು ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಗುಜರಾತ್ನ ರಾಜ್ಯಗಳ ಬಯಲು ಶೌಚ ಮುಕ್ತ 20 ಸ್ಥಳೀಯ ನಗರ ಸಂಸ್ಥೆಗಳಿಗೆ ಪ್ರಮಾಣಪತ್ರ ವಿತರಿಸಿದೆ.
ಭಾರತದ ಗುಣಮಟ್ಟ ಮಂಡಳಿ ಕಟ್ಟುನಿಟ್ಟಾದ ತಪಾಸಣೆ ನಡೆಸಿದ್ದು, ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈ ಸಂಸ್ಥೆಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಿದೆ.
ಇನ್ನುಳಿದಂತೆ ತೆಲಂಗಾಣದ ಸೂರ್ಯಪೇಟ್, ಶಾದ್ನಗರ್, ಸಿದ್ದಿಪೇಟ್, ಅಚಂಪೇಟ್, ಹುಜೂರ್ನಗರ್, ಆಂಧ್ರ ಪ್ರದೇಶದ ವಿಜಯವಾಡ, ಗುಜರಾತ್ನ ಕಡೋದರಾ, ಮಾಂಡ್ವಿ (ಸೂರತ್), ಶಹೇರಾ, ವಲ್ಲಭ್ ವಿದ್ಯಾನಗರ್, ಬರೇಜಾ, ಕಾಡಿ, ಮಾನ್ಸಾ, ರಾಪರ್, ಮಾಂಡ್ವಿ (ಕಚ್ಛ), ಸಲಾಯಾ, ವಾಂಥ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
‘ಸ್ವಚ್ಚತಾ ಸಪ್ತಾಹ’ ಆಚರಣೆಯ ಅಂಗವಾಗಿ ಭಾರತದ ಗುಣಮಟ್ಟ ಮಂಡಳಿ ಈ ಸ್ಥಳೀಯ ನಗರ ಸಂಸ್ಥೆಗಳಿಗೆ ಸ್ವಚ್ಛತಾ ಪ್ರಮಾಣಪತ್ರಗಳನ್ನು ವಿತರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.