ನವದೆಹಲಿ: ಇನ್ನು ಮೊದಲನೇ ಮತ್ತು ಎರಡನೇ ಗ್ರೇಡ್ ವಿದ್ಯಾಭ್ಯಾಸ ಮಾಡುವ ಸಿಬಿಎಸ್ಇ ಪುಟಾಣಿಗಳಿಗೆ ಬ್ಯಾಗು ಭಾರವಾಗುತ್ತದೆ. ಹೆಗಲು ನೋಯಿಸಿಕೊಳ್ಳುವುದರಿಂದ ಮುಕ್ತಿ ದೊರಕುವ ಕಾಲ ಸನ್ನಿಹಿತ. ಜೊತೆಗೆ ಮನೆಕೆಲಸವೂ ಇಲ್ಲ!
ಮಹಾರಾಷ್ಟ್ರ ಸರಕಾರದ ಒತ್ತಾಸೆಯ ಫಲವಾಗಿ ಸಿಬಿಎಸ್ಇಯೂ ಮಕ್ಕಳ ಪುಸ್ತಕದ ಹೊರೆಯನ್ನು ಶೇ.10ರಷ್ಟು ಇಳಿಸುವ ಯೋಚನೆಯನ್ನು ಗಂಭೀರವಾಗಿ ಮಾಡುತ್ತಿದೆ. ಈ ಕುರಿತು ಗುರುವಾರ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ.
ಭಾರವಾದ ಬ್ಯಾಗುಗಳು ದೇಹದ ಮೇಲೆಯೂ ಪರಿಣಾಮ ಬೀರುತ್ತದೆ. ಇಂಥ ಚೀಲಗಳನ್ನು ಬಹಳ ಕಾಲ ಹೊತ್ತುಕೊಂಡರೆ ಬೆನ್ನುನೋವು, ಸ್ನಾಯುಸೆಳೆತ, ಹೆಗಲುಬೇನೆ ಬಾಧಿಸುತ್ತದೆ. ಹೀಗಾಗಿ ಸಿಬಿಎಸ್ಇಯ ಎಲ್ಲ ಶಾಲೆಗಳಿಗೂ ಟೈಮ್ ಟೇಬಲ್ ಪಾಲನೆ ಮತ್ತು ಶಾಲಾ ಚೀಲ ಭಾರದ ಅಡ್ಡಪರಿಣಾಮಗಳ ಬಗ್ಗೆ ಚಿಂತಿಸಿದ್ದು, ಈ ಕುರಿತು ಸೂಚನೆ ಹೊರಡಿಸಿದೆ.
ವರ್ಕ್ ಬುಕ್ಗಳ ಬದಲು ಬಿಡಿ ಕಾಗದ ತರುವುದು ಇವೇ ಮೊದಲಾದ ಬದಲಿ ವ್ಯವಸ್ಥೆ ಮಾಡಬೇಕು. ಒಟ್ಟಾರೆಯಾಗಿ ಮಕ್ಕಳ ಹೊರೆ ಕಡಿಮೆಯಾಗಬೇಕು ಎಂಬುದು ಇದರ ತಿರುಳು.
ಮಹಾರಾಷ್ಟ್ರದ ಚಂದ್ರಪುರದ ಹನ್ನೆರಡು ವರ್ಷದ ಬಾಲಕರು ಪತ್ರಿಕಾಗೋಷ್ಠಿಯಲ್ಲೇ ಚೀಲದ ಹೊರೆಯ ಬಗ್ಗೆ ತಿಳಿಸಿದ್ದರು. ಅದಾದ ಬಳಿಕ ಶಾಲಾ ಆವರಣದಲ್ಲಿ ಪುಸ್ತಕ ಹಾಕಲು ಲಾಕರ್ ಇಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.