ಲಂಡನ್: ಭಾರತೀಯ ಮೂಲದ ಓರ್ವ ಇಂಜಿನಿಯರ್ ಸೌರಶಕ್ತಿ ಚಾಲಿತ ಟುಕ್ ಟುಕ್ (ರಿಕ್ಷಾ)ದಲ್ಲಿ 7 ತಿಂಗಳ ಕಾಲ 6200 ಕಿ.ಮೀ. ಪ್ರಯಾಣಿಸಿದ್ದಾರೆ. ಅದೂ ವಿದೇಶದಲ್ಲಿ ಪ್ರಯಾಣಿಸಿರುವುದು ವಿಶೇಷ.
ಫೆಬ್ರವರಿಯಲ್ಲಿ ಭಾರತದಿಂದ ಪ್ರಯಾಣ ಬೆಳೆಸಿದ ನವೀನ್ ರಬೆಲ್ಲಿ, ಇಂಗ್ಲೆಂಡ್ನ ಡೋವರ್ ನಗರಕ್ಕೆ ತಲುಪಿದ್ದಾರೆ.
ಆಸ್ಟ್ರೇಲಿಯಾ ನಾಗರಿಕತ್ವ ಪಡೆದಿರುವ ನವೀನ್, ಅಲ್ಲಿಯ ಕಂಪೆನಿಯೊಂದರಲ್ಲಿ ಅಟೋಮೋಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಬಕಿಂಗ್ಯಾಮ್ ಪ್ಯಾಲೇಸ್ನಲ್ಲಿ ತಮ್ಮ ಪ್ರಯಾಣ ಕೊನೆಗೊಳಿಸುವ ಯೋಜನೆ ಹೊಂದಿದ್ದಾರೆ.
ತಾವು ನಿರ್ಮಿಸಿರುವ ಟುಕ್ ಟುಕ್ ಪೆಟ್ರೋಲ್ ಬದಲು ಸೌರಶಕ್ತಿಯಿಂದ ಚಲಿಸುತ್ತಿದ್ದು, ಇದು ಚಾಲಕ ಅಲ್ಲದೇ ಒಂದು ಸಹ ಪ್ರಯಾಣಿಕ ಸೀಟ್, ಒಂದು ಹಾಸಿಗೆ, ಜನರು ದಾನ ಮಾಡಿದ ಆಹಾರ ಶೇಖರಿಸಿಡುವ ಒಂದು ಕಪಾಟು, ಸೌರಶಕ್ತಿ ಚಾಲಿತ ಕುಕರ್ ಅಳವಡಿಸಲಾಗಿದೆ.
ರಬೆಲ್ಲಿ ಪೆಟ್ರೋಲ್ಗೆ ಪರ್ಯಾಯವಾಗಿ ವಿದ್ಯುತ್ ಮತ್ತು ಸೌರ ಚಾಲಿತ ವಾಹನಗಳ ಅರಿವು ಮೂಡಿಸುವ ಸಲುವಾಗಿ ಈ ಪ್ರಚಾರ ಆರಂಭಿಸಿದ್ದರು.
ಭಾರತದಲ್ಲಿ ತನ್ನ ಸ್ನೇಹಿತನ ಜೊತೆ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಟ್ರಾಫಿಕ್ನಲ್ಲಿ ಸಿಲುಕಿಕೊಂಡ ವೇಳೆ ಇಲ್ಲಿಯ ಶಬ್ದ ಮತ್ತು ವಾಯು ಮಾಲಿನ್ಯದ ರಿಕ್ಷಾಗಳ ಬದಲು ನವೀಕರಿಸಬಹುದಾದ ಸೌರಶಕ್ತಿ ಶಾಲಿತ ಟುಕ್ಟುಕ್ ಯೋಜನೆ ಹೊಳೆಯಿತು ಎಂದು ನವೀನ್ ಹೇಳುತ್ತಾರೆ.
ಭಾರತದಿಂದ ಇರಾನ್ನ ಬಂದಾರ್ ಅಬ್ಬಾಸ್ಗೆ ನವೀನ್ ಅವರ ಟುಕ್ಟುಕ್ ಹಡಗಿನ ಮೂಲಕ ಸಾಗಿಸಲಾಗಿದ್ದು, ಅವರು ಈವೆರೆಗೆ ಇರಾನ್, ಟರ್ಕಿ, ಬಲ್ಗೇರಿಯಾ, ಸರ್ಬಿಯಾ, ಆಸ್ಟ್ರಿಯಾ, ಸ್ವಿಜರ್ಲ್ಯಾಂಡ್, ಫ್ರಾನ್ಸ್ ಮೂಲಕ ಬ್ರಿಟನ್ ತಲುಪಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.