ಪುತ್ತೂರು : ಪುತ್ತೂರಿನ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು, ಕ್ಯಾಂಪ್ಕೋ ಆವರಣದಲ್ಲಿ ರಚಿಸಿದ ಬೃಹತ್ “ಪೂಕಳಂ” ನಲ್ಲಿ ದೀಪ ಬೆಳಗಿಸುವುದರ ಮೂಲಕ ಓಣಂ ಹಬ್ಬವನ್ನು ಆಚರಿಸಲಾಯಿತು. ದೀಪ ಬೆಳಗಿಸಿ ಶುಭ ಹಾರೈಸಿದ ಸಂಸ್ಥೆಯ ಎ.ಜಿ.ಯಂ. ( ಆಡಳಿತ) ಪ್ರಾನ್ಸಿಸ್ ಡಿ’ಸೋಜ, ವಾಸುದೇವ ಕಾರಂತ್ ಓಣಂ ಹಬ್ಬದ ಆಚರಣೆಯ ಮಹತ್ವವನ್ನು ತಿಳಿಸಿದರು. ಚೀಪ್ ಮೆನೇಜರ್ (ಮೆಕ್ಯಾನಿಕಲ್) ಕರುಣಾಕರ ಶೆಟ್ಟಿಗಾರ್, ಚೀಪ್ ಮೆನೇಜರ್ (ಇಲೆಕ್ಟ್ರಿಕಲ್) ಅವಿನಾಶ್ ರೈ, ಸ್ಟೋರ್ ಮೆನೇಜರ್ ಸುಭಾಶ್ಚಂದ್ರ , ಆಕೌಂಟ್ಸ್ ಮೆನೇಜರ್ ಲಕ್ಷಣ್ ಡೋಂಗ್ರೆ, ಚೀಪ್ ಮೆನೇಜರ್ ಅನುಪ್, ಸಂಸ್ಥಯ ನೌಕರರು ಹಾಗೂ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.