ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಬಂಧಿಸಲು ಕೇಂದ್ರ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಪಾಕಿಸ್ಥಾನದಲ್ಲಿ ಅವಿತುಕೊಂಡು ಎಲ್ಲಾ ಭೂಗತ ಚಟುವಟಿಕೆಗಳನ್ನು ಮುಂದುವರೆಸುತ್ತಿರುವ ದಾವೂದ್ ಇಬ್ರಾಹಿಂನನ್ನು ಬಂಧಿಸಿಲು ಕೇಂದ್ರ ಸರ್ಕಾರ ಯೋಜನೆಯನ್ನು ಸಿದ್ಧಪಡಿಸಿದ್ದು, ಇದಕ್ಕಾಗಿ 50 ಜನ ಸದಸ್ಯರ ವಿಶೇಷ ತಂಡವನ್ನು ರಚಿಸಲಾಗಿದೆ ಎನ್ನಲಾಗಿದೆ.
ವಿಶ್ವದಾದ್ಯಂತ ದಾವೂದ್ಗೆ ಸೇರಿದ ಉದ್ಯಮ ಹಾಗೂ ಇನ್ನಿತರ ಆಸ್ತಿಪಾಸ್ತಿಗಳನ್ನು ನಾಶಪಡಿಸುವುದು ಸರ್ಕಾರದ ಉದ್ದೇಶವಾಗಿದ್ದು, ದಾವೂದ್ ಸೇರಿದಂತೆ ಆತನ ಸಹಚರರ ಚಟುವಟಿಕೆಗಳ ಮೇಲೂ ಅಧಿಕಾರಿಗಳು ಕಣ್ಣಿಡಲಿದ್ದಾರೆ. 50 ಉನ್ನತ ಅಧಿಕಾರಿಗಳನ್ನೊಳಗೊಂಡ 5 ವಿಶೇಷ ತನಿಖಾ ತಂಡಗಳನ್ನು ಕೇಂದ್ರ ರಚನೆ ಮಾಡಿದೆ ಎನ್ನಲಾಗಿದೆ. ಅಧಿಕಾರಿಗಳಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದೆ ಎಂದೂ ಹೇಳಲಾಗಿದೆ.
ತನ್ನ ಮೇಲೆ ದಾಳಿ ನಡೆಯಬಹುದೆಂಬ ಹಿನ್ನಲೆಯಲ್ಲಿ ದಾವೂದ್ ಶೇಖ್ ಇಸ್ಮಾಯಿಲ್ ಮರ್ಚೆಂಟ್ ಎಂಬ ಹೆಸರಿನಲ್ಲಿ ಕರಾಚಿಯಲ್ಲಿ ನೆಲೆಯೂರಿದ್ದು, ಭದ್ರತಾ ದೃಷ್ಟಿಯಿಂದ ದಾವೂದ್ ಸೇರಿದಂತೆ ಆತನ ಕುಟುಂಬಸ್ಥರೆಲ್ಲರೂ ಓಡಾಡುವುದಕ್ಕೆ ಬುಲೆಟ್ ಫ್ರೂಫ್ ಕಾರನ್ನು ಉಪಯೋಗಿಸುತ್ತಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.