ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳು ವಿವಿಧ ಹವಾಲಾ ಮಾಧ್ಯಮಗಳ ಮೂಲಕ ಹಣವನ್ನು ಸ್ವೀಕರಿಸುತ್ತಿವೆ ಎಂಬುದರ ಬಗ್ಗೆ ಈಗಾಗಲೇ ಹಲವು ವರದಿಗಳಿಂದ ತಿಳಿದುಬಂದಿದೆ.
ಜಮ್ಮು ಕಾಶ್ಮೀರ ಸರ್ಕಾರದ ವರದಿಯ ಪ್ರಕಾರ ಹವಾಲಾ ಹಣ ಸಾಗಣೆಗೆ ಸಂಬಂಧಿಸಿದಂತೆ ಒಟ್ಟು ೬ ಪ್ರಕರಣಗಳನ್ನು ಈವರೆಗೆ ದಾಖಲು ಮಾಡಲಾಗಿದೆ.
ವೆಬ್ಸೈಟ್ ಒಂದು ವರದಿಯನ್ನು ಮಾಡಿರುವಂತೆ ಸಲ್ವಾರ್ ಕಮೀಜ್ ಒಳಗೆ ಒಟ್ಟುಕೊಂಡು ಮಹಿಳೆಯರು ಹವಾಲಾ ಹಣ ಸಾಗಿಸುತ್ತಿದ್ದಾರೆ. ಅಲ್ಲದೆ ಗ್ಯಾಸ್ ಸಿಲಿಂಡರ್ ಮೂಲಕವೂ ಹಣದ ಕಳ್ಳ ಸಾಗಣೆ ಮಾಡಲಾಗುತ್ತಿದೆ.
ಜಮ್ಮು ಕಾಶ್ಮೀರದಲ್ಲಿ ಹಣ ಸಾಗಣೆ ಮಾಡಲು ಪಾಕಿಸ್ಥಾನದಿಂದ ಆದೇಶ ಬರುತ್ತಿದೆ.
ಜಗತ್ತಿನಲ್ಲಿರುವ ಪಾಕ್ ಪರ ಒಲವುದಾರರಿಂದ ಹಣವನ್ನು ಸಂಗ್ರಹಿಸಿ ಅದನ್ನು ಹವಾಲಾ ಮೂಲಕ ಕಾಶ್ಮೀರಕ್ಕೆ ತಂದು ಪ್ರತ್ಯೇಕತಾವಾದಿಗಳಿಗೆ ನೀಡಲಾಗುತ್ತಿದೆ.
ಗಲ್ಫ್ ದೇಶಗಳಿಂದ ಹವಾಲಾ ಮೂಲಕ ಕಾಶ್ಮೀರಕ್ಕೆ ಹಣ ಹರಿಯುತ್ತಿರುವ ಬಗ್ಗೆ ಹಲವಾರು ಬಾರಿ ಬಿಜೆಪಿ ಧ್ವನಿಯೆತ್ತಿದೆ. ಈ ಹಣಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರ ತರಬೇತಿ, ಭಾರತ ವಿರೋಧಿ ಚಟುವಟಿಕೆಗಳಿಗೂ ಬಳಸಲಾಗುತ್ತಿದೆ ಎನ್ನಲಾಗಿದೆ.
ಮಾತ್ರವಲ್ಲದೆ, ಕೆಲವರಿಗೆ ಹಣವನ್ನು ನೀಡಿ ಕಾಶ್ಮೀರದಲ್ಲಿ ಹಿಂಸೆಯನ್ನು ಪ್ರಚೋದಿಸಲಾಗುತ್ತಿದೆ. ಈ ಮೂಲಕ ಭಾರತಕ್ಕೆ ಕೆಟ್ಟ ಹೆಸರನ್ನು ತರುವುದು ಇದರ ಹಿಂದಿನ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.