ನವದೆಹಲಿ: 2016-17ನೇ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.8ಕ್ಕೆ ಏರಿಕೆಯಾಗಲಿದೆ ಎಂದು ಎಫ್ಐಸಿಸಿಐ ಸಮೀಕ್ಷೆ ತಿಳಿಸಿದೆ.
ಕೃಷಿ ಮತ್ತು ಉದ್ಯಮ ವಲಯದಲ್ಲಿ ಉತ್ತಮ ಸುಧಾರಣೆಯಿಂದಾಗಿ ಕಳೆದ ಆರ್ಥಿಕತೆಯ ವಿರುದ್ಧ 2016-17ರ ಆರ್ಥಿಕತೆಯಲ್ಲಿ ಸುಧಾರಣೆ ಕಂಡಿದೆ ಎಂದು ಎಫ್ಐಸಿಸಿಐ ಸಮೀಕ್ಷೆಯ ವರದಿ ಬಿಡುಗಡೆ ಮಾಡುತ್ತ ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯ (ಆರ್ಬಿಐ) ಕಳೆದ ಆರ್ಥಿಕತೆಗೆ ಹೋಲಿಸಿದರೆ ಈ ಬಾರಿ ಭಾರತದ ಆರ್ಥಿಕತೆ ಉತ್ತಮವಾಗಿದ್ದು, 2016-17ರಲ್ಲಿ ಶೇ.7.6ರಷ್ಟು ವಿಸ್ತರಣೆ ಹೊಂದುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಎಫ್ಐಸಿಸಿಐಯ ಎಕಾನಮಿಕ್ ಔಟ್ಲುಕ್ ಸರ್ವೇ ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ 7.8ರಷ್ಟು ಇರಲಿದೆ ಎಂದು ಸೂಚಿಸಿದೆ.
ಉದ್ಯಮ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕ್ಷೇತ್ರದ ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ಈ ಸಮೀಕ್ಷೆಯನ್ನು ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಸಲಾಗಿತ್ತು.
ಸಮೀಕ್ಷೆಯೊಂದರಲ್ಲಿ 2016-17ರ ಐಐಪಿ ಸರಾಸರಿ ಬೆಳವಣಿಗೆ ಸೂಚನೆಯನ್ನು ಶೇ.3.5ರಷ್ಟು ಇರಿಸಲಾಗಿದ್ದು, ಕ್ರಮವಾಗಿ ಕನಿಷ್ಟ 2 ಮತ್ತು ಗರಿಷ್ಟ 4.3ರಷ್ಟು ಇರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.