ಕಠ್ಮಂಡು: ನೇಪಾಳವನ್ನು ಭಾಗಶಃ ನೆಲಸಮಗೊಳಿಸಿ ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾದ ಭೂಕಂಪ ಇಡೀ ಕಠ್ಮಂಡು ನಗರವನ್ನೇ 10 ಅಡಿಗಳಷ್ಟು ದಕ್ಷಿಣಕ್ಕೆ ವಾಲಿದೆ, ಆದರೆ ಮೌಂಟ್ ಎವರೆಸ್ಟ್ನ ಎತ್ತರ ಸ್ಥಿರವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
‘ಭೂಕಂಪ ಸಂಭವಿಸಿದ ಬಳಿಕ ಭೂಮಿಯಾದ್ಯಂತ ಸಂಚರಿಸಿದ ಶಬ್ದ ತರಂಗಗಳ ಮೂಲಕ ಪಡೆದ ಪ್ರಾಥಮಿಕ ದಾಖಲೆಯ ಪ್ರಕಾರ ಕಠ್ಮಂಡುವಿನ ನೆಲ ದಕ್ಷಿಣಕ್ಕೆ 10 ಪೀಟ್ ಸ್ಥಾನಪಲ್ಲಟಗೊಂಡಿದೆ’ ಎಂದು ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟೆಕ್ಟಾನಿಕ್ಸ್ ತಜ್ಞ ಜೇಮ್ಸ್ ಜಾಕ್ಸ್ನ್ ಹೇಳಿದ್ದಾರೆ.
ಅಡಿಲೇಡ್ ವಿಶ್ವವಿದ್ಯಾನಿಲಯದ ತಜ್ಞರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಶನಿವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪ ಪುಟ್ಟ ಹಿಮಾಲಯ ದೇಶ ಕಳೆದ 8೦ ವರ್ಷಗಳಿಂದ ಕಂಡರಿಯದ ಭೀಕರ ದುರಂತಕ್ಕೆ ಸಾಕ್ಷಿಯಾಯಿತು. 4,300ಮಂದಿ ಇದಕ್ಕೆ ಬಲಿಯಾದುದಲ್ಲದೇ 8 ಸಾವಿರ ಮಂದಿ ಗಾಯಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.