ಮೈಸೂರು: ದೇಶದ ನಾಗರಿಕೆ ಆಧಾರ್ ಸಂಖ್ಯೆ ಇದ್ದಂತೆ ರಾಜ್ಯದಲ್ಲಿರುವ ಆನೆಗಳಿಗೂ ಸಹ ಶೀಘ್ರದಲ್ಲೇ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು.
ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಖಾಸಗಿ ಸಂಸ್ಥೆಗಳು, ವೈಯಕ್ತಿಕ ವ್ಯಕ್ತಿಗಳ ಒಡೆತನದಲ್ಲಿ ಇರುವ ಆನೆಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತಿದ್ದು, ಅವುಗಳನ್ನು ವಿಶಿಷ್ಟ ಐಡಿ ಸಂಖ್ಯೆ ಜೊತೆ ಸಂಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ದಸರಾ ಉತ್ಸವಕ್ಕೆ ಬಳಸಲಾಗುವ ಆನೆಗಳು ಸೇರಿದಂತೆ ಸುಮಾರು ೬೦ ಆನೆಗಳಿಗೆ ಐಡಿ ಸಂಖ್ಯೆ ನೀಡಲಾಗುತ್ತಿದ್ದು, ಅರಣ್ಯ ಇಲಾಖೆಗೆ ಅವುಗಳ ನೆರವಾಗಲು ಮತ್ತು ಮೇಲ್ವಿಚಾರಣೆಗೆ ಸಹಾಯಕವಾಗಲಿದೆ.
ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ೀ ನಿರ್ಧಾರ ಕೈಗೊಳ್ಳಲಾಗಿದ್ದು, ಐಡಿ ಸಂಖ್ಯೆಯನ್ನು ಖಾಸಗಿ ಒಡೆತನದಲಲ್ಲಿರುವ ದೇವಸ್ಥಾನ, ಮಠಗಳಲ್ಲಿರುವ ಆನೆಗಳಿಗೂ ನೀಡಲಾಗುಉದು ಎಂದು ಹೇಳಲಾಗಿದೆ.
ಖಾಸಗಿ ಮಾಲೀಕರು, ಅರಣ್ಯ ಅಧಿಕಾರಿಗಳು ತನಿಖೆ ಸಂದರ್ಭದಲ್ಲಿ ಒದಗಿಸುವ ತಪಪು ಮಾಹಿತಿಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.