ಬೆಂಗಳೂರು : ಪಾಕಿಸ್ಥಾನವನ್ನು ಹೊಗಳಿ ಇದೀಗ ದೇಶದ್ರೋಹದ ಆರೋಪ ಎದುರಿಸುತ್ತಿರುವ ನಟಿ ಹಾಗೂ ರಾಜಕಾರಣಿಯಾಗಿರುವ ರಮ್ಯ ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ.
‘ಪಾಕ್ ನರಕವಲ್ಲ, ಅಲ್ಲಿನ ಜನರು ನಮ್ಮಂತೆಯೇ ಇದ್ದಾರೆ. ನಾವು ಅಲ್ಲಿಗೆ ಹೋಗಿದ್ದಾಗ ನಮ್ಮನ್ನು ಅಲ್ಲಿ ಉತ್ತಮ ರೀತಿಯಲ್ಲಿ ನಡೆಸಿಕೊಂಡಿದ್ದಾರೆ’ ಎಂದು ಇಸ್ಲಾಮಾಬಾದ್ಗೆ ಭೇಟಿ ಕೊಟ್ಟು ಮರಳಿದ ಬಳಿಕ ರಮ್ಯ ಹೇಳಿಕೆ ನೀಡಿದ್ದರು.
ಸಾರ್ಕ್ ನಿಯೋಗದ ಯುವ ರಾಜಕಾರಣಿಗಳ ತಂಡದಲ್ಲಿ ಓರ್ವ ಸದಸ್ಯೆಯಾಗಿ ರಮ್ಯ ಇಸ್ಲಾಮಾಬಾದ್ಗೆ ತೆರಳಿದ್ದರು.
ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ನೀಡಿದ್ದ ‘ಪಾಕಿಸ್ಥಾನಕ್ಕೆ ಹೋಗುವುದೆಂದರೆ ನರಕಕ್ಕೆ ಹೋದಂತೆ’ ಎಂಬ ಹೇಳಿಕೆಗೆ ಪ್ರತಿಯಾಗಿ ರಮ್ಯ ಪಾಕ್ ನರಕವಲ್ಲ ಎಂದಿದ್ದರು.
ಅವರ ಈ ಹೇಳಿಕೆ ವಿರುದ್ಧ ವಕೀಲ ಕಟ್ನಾಮಾನೆ ವಿಠ್ಠಲ ಗೌಡ ಎಂಬುವವರು ದೇಶದ್ರೋಹದ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ಆದರೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಮ್ಯ ಯಾವುದೇ ಕಾರಣಕ್ಕೂ ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ.
ರಾಜ್ಯಾದ್ಯಂತ ಈ ಹೇಳಿಕೆ ಖಂಡಿಸಿ ಹಲವಾರು ಪ್ರತಿಭಟನೆಗಳು ನಡೆದಿದ್ದು, ನಡೆಯುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.