ನವದೆಹಲಿ : ಕ್ರೀಡೆಯಲ್ಲಿ ಅತ್ಯದ್ಭುತ ಸಾಧನೆ ತೋರಿದ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಸಲುವಾಗಿ ಪ್ರತಿ ವರ್ಷ ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಸನ್ಮಾನ ಮಾಡಲಾಗುತ್ತದೆ.
ಕ್ರೀಡೆ, ಕ್ರೀಡಾ ತರಬೇತಿ, ಜೀವಮಾನದ ಸಾಧನೆ… ಹೀಗೆ ವಿವಿಧ ವಿಭಾಗಗಳ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ.
4 ವರ್ಷಗಳಿಂದ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅರ್ಜುನ ಮತ್ತು ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತದೆ.
ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್, ಶೂಟರ್ ಜಿತು ರೈ ಭಾಜನರಾಗಿದ್ದಾರೆ.
ಅರ್ಜುನ ಪ್ರಶಸ್ತಿಗೆ ರಜತ್ ಚೌಹಾನ್, ಲಲಿತಾ ಬಾಬರ್, ಸೌರವ್ ಕೊಥಾರಿ, ಶಿವಾ ಥಪ್ಪಾ, ವಿನೇಶ್, ಸುಬ್ರತಾ ಪೌಲ್, ಅಜಿಂಕ್ಯ ರಹಾನೆ, ರಾಣಿ, ರಘುನಾಥ್ ವಿ.ಆರ್., ಗುರುಪ್ರೀತ್ ಸಿಂಗ್, ಅಪೂರ್ವಿ ಚಂಡೇಲಾ, ಸೌಮ್ಯಜಿತ್ ಘೋಷ್, ಅಮಿತ್ ಕುಮಾರ್, ಸಂದೀಪ್ ಸಿಂಗ್ ಮನ್, ವಿರೇಂದ್ರ ಸಿಂಗ್ ಇವರುಗಳು ಭಾಜನರಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪದಕ ವಿಜೇತರನ್ನು ಸೃಷ್ಟಿಸುವ ಕೋಚ್ಗಳಿಗೆ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಗೆ ಈ ಬಾರಿ ನಾಗಪುರಿ ರಮೇಶ್, ಸಾಗರ್ ಮಾಲ್ ದಯಾಲ್, ರಾಜ್ ಕುಮಾರ್ ಶರ್ಮಾ, ಬಿಶ್ವೇಶ್ವರ ನಂದಿ, ಪ್ರದೀಪ್ ಕುಮಾರ್, ಮಹಾಬಿರ್ ಸಿಂಗ್ ಇವರುಗಳು ಪಾತ್ರರಾಗಿದ್ದಾರೆ.
ಜೀವಮಾನದ ಸಾಧನೆ ಮಾಡಿದವರಿಗೆ ನೀಡಲಾಗುವ ಧ್ಯಾನ್ಚಂದ್ ಪ್ರಶಸ್ತಿಗೆ ಸತ್ತಿ ಗೀತಾ, ಸಿಲ್ವೇನಸ್ ದಂಗ್ ದಂಗ್, ರಾಜೇಂದ್ರ ಪ್ರಹ್ಲಾದ್ ಶೆಲ್ಕೆ ಇವರು ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.