ನವದೆಹಲಿ: GoAir ವಿಮಾನ ವಾಹಕ ಮುಂದಿನ ತಿಂಗಳುಗಳಲ್ಲಿ 70 ಪೈಲಟ್ಗಳು ಸೇರಿದಂತೆ 500 ಸಿಬ್ಬಂದಿಗಳನ್ನು ನೇಮಕ ಮಾಡಲಿದ್ದು, ವಿಮಾನ ಶ್ರೇಣಿಯನ್ನು ವಿಸ್ತರಿಸುವ ಮೂಲಕ ಸಾಗರೋತ್ತರ ರಾಷ್ಟ್ರಗಳಿಗೆ ಹಾರಾಟ ನಡೆಸುವ ಯೋಜನೆ ಹೊಂದಿದೆ.
ತನ್ನ ಮಹತ್ವಾಕಾಂಕ್ಷಿ ವಿಸ್ತರಣಾ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗುತ್ತಿರುವ ವಾಡಿಯಾ ಗ್ರೂಪ್ನ ಗೋಏರ್ ವಿಮಾನ ವಾಹಕ ಪ್ರಸ್ತುತ 21 ವಿಮಾನಗಳನ್ನು ಹೊಂದಿದ್ದು, ಮಾರ್ಚ್ ತಿಂಗಳ ಒಳಗಾಗಿ 26 ವಿಮಾನಗಳನ್ನು ಹೊಂದಲು ಯೋಜಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಚ್ ತಿಂಗಳ ಒಳಗಾಗಿ ವಿಮಾನಗಳನ್ನು 21 ರಿಂದ 26ಕ್ಕೆ ಹೆಚ್ಚಿಸುವ ಯೋಜನೆ ಇದೆ. ಪ್ರತಿ ವಿಮಾನಕ್ಕೆ 100 ರಷ್ಟು ಮಾನವಶಕ್ತಿಯ ಅಗತ್ಯವಿದ್ದು, ಸಿಬ್ಬಂದಿಗಳ ನೇಮಕ ಮಾಡಲಿದ್ದೇವೆ. ಪ್ರಸ್ತುತ 2,300 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗೋಏರ್ ಸಿಇಒ ವೋಲ್ಫ್ಗ್ಯಾಂಗ್ ಪ್ರಾಕ್-ಶ್ಯೂವರ್ ಹೇಳಿದ್ದಾರೆ.
ವಿದೇಶ ಹಾರಾಟಕ್ಕೆ ಕೇಂದ್ರ ಅನುಮತಿ ಪಡೆದಿರುವ ಗೋಏರ್ ಸ್ವತಂತ್ರ ರಾಜ್ಯಗಳ ಕಾಮನ್ವೆಲ್ತ್ (ಸಿಐಎಸ್)ಗಳಾದ ಇರಾನ್, ಕಜಕಿಸ್ಥಾನ, ಉಜ್ಬೇಕಿಸ್ಥಾನ, ಅಝರ್ಬೈಜನ್ಗಳಿಗೆ ಹಾರಾಟ ನಡೆಸಲಿರುವ ಭಾರತದ ಮೊದಲ ಖಾಸಗಿ ವಿಮಾನಯಾನವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.