ಹೈದರಾಬಾದ್ : ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಭಾರತ ಉದಯಿಸುವಂತೆ ಆಗಲು, ಕ್ರೀಡಾಪಟುಗಳು ಬ್ಯಾಡ್ಮಿಂಟನ್ ಬಗ್ಗೆ ಆಸಕ್ತಿಯಿಂದ ತಿರುಗಿ ನೋಡುವಂತಾಗಲು ಕಾರಣೀಕರ್ತರಾದ ವ್ಯಕ್ತಿಯೆಂದರೆ ಪುಲ್ಲೆಲಾ ಗೋಪಿಚಂದ್. ಅವರು ಸ್ಥಾಪಿಸಿದ ಗೋಪಿಚಂದ್ ಅಕಾಡೆಮಿ ಭಾರತದಲ್ಲಿ ವಿಶ್ವದರ್ಜೆಯ ಶಟ್ಲರ್ಸ್ಗಳನ್ನು ಉತ್ಪಾದಿಸುತ್ತಿದೆ.
16 ವರ್ಷಗಳ ಹಿಂದೆ ಸಿಡ್ನಿ ಒಲಿಂಪಿಕ್ಸ್ನಲ್ಲಿ ಅತ್ಯಂತ ಆಘಾತಕಾರಿಯಲ್ಲಿ ಸೋತ ಗೋಪಿಚಂದ್ ತನ್ನ ಒಲಿಂಪಿಕ್ ಕನಸನ್ನು ಇತರರ ಮೂಲಕ ನನಸು ಮಾಡಲು ಹೊರಟವರು.
ಸಿಂಧು ರಿಯೋದಲ್ಲಿ ಬೆಳ್ಳಿ ಗೆದ್ದಾಗ ಆಕೆಗಿಂತ ಹೆಚ್ಚು ಸಂಭ್ರಮಪಟ್ಟವರು ಇದೇ ಗೋಪಿಚಂದ್.
ಸಿಂಧು, ಸೈನಾರಂತಹ ಆಕ್ರಮಣಕಾರಿ ಬ್ಯಾಡ್ಮಿಂಟನ್ ತಾರೆಯರು ಅವರ ಅಕಾಡೆಮಿಯ ಉತ್ಪನ್ನಗಳು.
ಶ್ರೀಕಾಂತ್, ಪರುಪಳ್ಳಿ ಕಶ್ಯಪ್, ಪೊನ್ನಾಯ್ ಕುಮಾರ್, ಅರುಂಧತಿ ಪಂಟನಾನಿ, ಅರುಣ್ ವಿಷ್ಣು ಮುಂತಾದ ತಾರೆಯರು ಗೋಪಿಚಂದ್ ಮಾರ್ಗದರ್ಶನದಲ್ಲಿ ಪಳಗಿದವರು.
ಒಲಿಂಪಿಕ್ ಪದಕ ವಿಜೇತರನ್ನು ಉತ್ಪಾದಿಸುವ ಕನಸು ಹೊತ್ತಿರುವ 42 ವರ್ಷದ ಗೋಪಿಚಂದ್, 2011 ರಲ್ಲಿ ಲಂಡನ್ ಒಲಿಂಪಿಕ್ನಲ್ಲಿ ಸೈನಾ ಕಂಚು, ರಿಯೋದಲ್ಲಿ ಸಿಂಧು ಬೆಳ್ಳಿ ಗೆಲ್ಲುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು.
10೦ ವರ್ಷದವಳಿದ್ದಾಗಲೇ ತನ್ನ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ ಸಿಂಧು ಅವರ ಪ್ರತಿಭೆಯನ್ನು ಆಗಲೇ ಗೋಪಿಚಂದ್ ಅವರು ಪತ್ತೆ ಹಚ್ಚಿದ್ದರು.
2008 ರಲ್ಲಿ 8 ಕೋರ್ಟ್ ಬ್ಯಾಡ್ಮಿಂಟನ್ ಹಾಲ್ಗಳುಳ್ಳ ಗೋಪಿಚಂದ್ ಅಕಾಡೆಮಿಯನ್ನು ಸ್ಥಾಪಿಸಿದ ಇವರು ದೇಶದ ಅತ್ಯದ್ಭುತ ಕೋಚ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅಲ್ಲದೆ ಇವರ ಅಕಾಡೆಮಿ ಏಷ್ಯಾದ ಅತ್ಯುತ್ತಮ ಅಕಾಡೆಮಿ ಎಂಬ ಹೆಸರು ಪಡೆದಿದೆ. ಗ್ವಾಲಿಯರ್, ವಡೋದರಾ, ಸಲೇಂನಲ್ಲೂ ಇವರ ಅಕಾಡೆಮಿಗಳಿವೆ.
2001 ರಲ್ಲಿ ಗೋಪಿಚಂದ್ ಆಲ್ ಇಂಡಿಯನ್ ಓಪನ್ ಚಾಂಪಿಯನ್ಶಿಪ್ ಗೆದ್ದಿದ್ದರು. ಪ್ರಕಾಶ್ ಪಡುಕೋಣೆ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಇವರು.
ಗಾಯದ ಸಮಸ್ಯೆಯಿಂದ ಬ್ಯಾಡ್ಮಿಂಟನ್ ಲೋಕಕ್ಕೆ ವಿದಾಯ ಹೇಳಬೇಕಾಗಿ ಬಂದರೂ ಕೋಚ್ ಆಗಿ ಭಾರತ ಬ್ಯಾಡ್ಮಿಂಟನ್ನಲ್ಲಿ ಉದಯವಾಗುವಂತೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.