ಇಟಾನಗರ : ಅರುಣಾಚಲ ಪ್ರದೇಶದ ಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್ನಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಸುಕೋಯ್-30 ಫೈಟರ್ ಜೆಟ್ ಶುಕ್ರವಾರ ಬಂದಿಳಿದಿದೆ.
1962 ರ ಚೀನಾ ಆಕ್ರಮಣದ ಬಳಿಕ ಭಾರತೀಯ ಸೇನೆ ಕೈಗೊಂಡ ಮೊದಲ ಮಿಲಿಟರಿ ಚಟುವಟಿಕೆ ಇದಾಗಿದೆ.
ಇಟಾನಗರದಿಂದ 198 ಕಿ.ಮೀ. ದೂರದಲ್ಲಿರುವ ಫಸ್ಸೀಘಾಟ್ನಲ್ಲಿ ಈ ಲ್ಯಾಂಡಿಂಗ್ ಗ್ರೌಂಡ್ನ್ನು ಸ್ಥಾಪಿಸಲಾಗಿದೆ.
ಚೀನಾ ಗಡಿ ಸಮೀಪದ ಲಡಾಕ್ನಲ್ಲಿ 100 ಟಿ-72 ಯುದ್ಧ ಟ್ಯಾಂಕ್ನ್ನು ಭಾರತ ನಿಯೋಜನೆ ಮಾಡಿದ ಬಳಿಕ ಭಾರತ ಅರುಣಾಚಲ ಪ್ರದೇಶದ ಈ ಲ್ಯಾಂಡಿಂಗ್ ಗ್ರೌಂಡ್ನಲ್ಲಿ ಯುದ್ಧ ವಿಮಾನವನ್ನು ಇಳಿಸುವ ಕಾರ್ಯವನ್ನು ಮಾಡಿದೆ.
ಅರುಣಾಚಲ ಪ್ರದೇಶದಲ್ಲಿನ ಭಾರತದ ಗಡಿಯಲ್ಲಿ ತನ್ನ ಸಾವಿರಾರು ಸ್ಕೇರ್ ಕಿ.ಮೀ. ಭೂಮಿ ಇದೆ ಎಂದು ವಾದಿಸುತ್ತಿರುವ ಚೀನಾವು ಭಾರತ ನಡೆಸುತ್ತಿರುವ ಈ ಬೆಳವಣಿಗೆಗಳ ಬಗ್ಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದೆ.
ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಅವರು ಏರ್ ಮಾರ್ಷಲ್ ಹರಿಕುಮಾರ್ ಅವರೊಂದಿಗೆ ಸೇರಿ ಈ ಲ್ಯಾಂಡಿಂಗ್ ಗ್ರೌಂಡ್ನ್ನು ಉದ್ಘಾಟನೆಗೊಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.