ನವದೆಹಲಿ : 1971 ರ ಬಾಂಗ್ಲಾ ಸ್ವಾತಂತ್ರ್ಯ ಯುದ್ಧ ನಡೆದು 2021ಕ್ಕೆ 50 ವರ್ಷ ಪೂರೈಸಲಿದೆ. ಈ ಹಿನ್ನಲೆಯಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳು ಜಂಟಿಯಾಗಿ ಯುದ್ಧದ ಸಾಕ್ಷ್ಯ ಚಿತ್ರವನ್ನು ತಯಾರು ಮಾಡುವ ಕಾರ್ಯವನ್ನು ಆರಂಭಿಸಿವೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತಿಳಿಸಿದೆ.
ಸಾಕ್ಷ್ಯ ಚಿತ್ರವನ್ನು ತಯಾರಿಸುವ ಬಗೆಗಿನ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಮತ್ತು ಬಾಂಗ್ಲಾ ಸಚಿವ ಹಸನುಲ್ ಹಕ್ ಇನೂ ಅವರ ನಡುವೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಅಲ್ಲದೆ ಆಲ್ಇಂಡಿಯಾ ರೇಡಿಯೋ ಬಾಂಗ್ಲಾ ಮತ್ತು ಬಾಂಗ್ಲಾದೇಶದ ಕೇಳುಗರಿಗಾಗಿ ಆಕಾಶವಾಣಿ ಮೈತ್ರಿ ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದು, ಅದು ಆಗಸ್ಟ್ ೨೩ ರಿಂದ ಚಾಲನೆ ದೊರಕಲಿದೆ.
ಅಲ್ಲದೆ ಬಾಂಗ್ಲಾದೇಶದ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಶತಮಾನೋತ್ಸವವೂ 2020 ರಂದು ನಡೆಯಲಿದ್ದು ಅದಕ್ಕಾಗಿ ಭಾರತ ತನ್ನ ಕಡೆಯಿಂದ ಮೆಗಾಮೂವಿ ಒಂದನ್ನು ಕೊಡುಗೆಯಾಗಿ ಸಮರ್ಪಿಸಲಿದೆ.
1971 ರಲ್ಲಿ ಪಾಕಿಸ್ಥಾನದ ವಿರುದ್ಧ ಹೋರಾಡಿದ ಬಾಂಗ್ಲಾ ಭಾರತದ ಸಹಾಯದೊಂದಿಗೆ ವಿಭಜನೆಗೊಂಡು ಸ್ವತಂತ್ರ ಬಾಂಗ್ಲಾದೇಶವನ್ನು ಪಡೆಯಿತು. ಈ ವೇಳೆ ಪಾಕಿಸ್ಥಾನ ನಡೆಸಿದ ದೌರ್ಜನ್ಯ, ಹಿಂಸೆ, ಅನ್ಯಾಯಗಳನ್ನು ಸಾಕ್ಷ್ಯ ಚಿತ್ರ ಒಳಗೊಳ್ಳಲಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.