ಮುಂಬಯಿ : ಮಹಾರಾಷ್ಟ್ರದ ರಾಜಭವನದ ಕೆಳಗೆ ಸುಮಾರು 150 ಮೀಟರ್ ಉದ್ದದ ಬ್ರಿಟೀಷರ ಕಾಲದ ಅಂಡರ್ಗ್ರೌಂಡ್ ಬಂಕರ್ ಒಂದು ಪತ್ತೆಯಾಗಿದೆ.
ಮುಂಬೈಯ ಮಲಬಾರ್ ಹಿಲ್ನಲ್ಲಿ ರಾಜಭವನವಿದ್ದು, ಸದ್ಯ ಅಲ್ಲಿ ಹಾಲಿ ರಾಜ್ಯಪಾಲ ಸಿ. ಹೆಚ್. ವಿದ್ಯಾಸಾಗರ್ ರಾವ್ ಮತ್ತು ಅವರ ಕುಟುಂಬ ನೆಲೆಸಿದೆ. ಈ ಬಂಕರ್ ಅನ್ನು ಹಲವಾರು ದಶಕಗಳಿಂದಲೂ ಮುಚ್ಚಲಾಗಿತ್ತು. ತಿಂಗಳ ಹಿಂದೆ ಇಲ್ಲಿ ಬಂಕರ್ ಇರುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ಸಿಕ್ಕಿದ್ದು, ಇದೀಗ ಅವರು ಅದನ್ನು ತೆರೆಯಲು ಅನುಮತಿ ನೀಡಿದ್ದಾರೆ.
ಅಲ್ಲಿಗೆ ಆಗಮಿಸಿ ರಾಜ್ಯಪಾಲರು ಮತ್ತು ಅವರ ಪತ್ನಿ ಬಂಕರ್ ವೀಕ್ಷಿಸಿದರು. ಅಲ್ಲದೆ ಅದರ ಸಂರಕ್ಷಣೆಗಾಗಿ ತಜ್ಞರ ಸಲಹೆ ಪಡೆಯುವುದಾಗಿ ತಿಳಿಸಿದ್ದಾರೆ.
ರಾಜಭವನದ ತಾತ್ಕಾಲಿಕ ಗೋಡೆಯನ್ನು ಕೆಡವಿ ಬಂಕರ್ ಅನ್ನು ತೆರೆಯಲಾಗಿದೆ. ಅಂಡರ್ಗ್ರೌಂಡ್ ಸುರಂಗ ಮಾತ್ರವಲ್ಲದೆ ಹಲವಾರು ರೂಂಗಳು ಪತ್ತೆಯಾಗಿವೆ.
5,000 ಸ್ಕೇರ್ ಫೀಟ್ ಪ್ರದೇಶದಲ್ಲಿ ಬಂಕರ್ ಇದ್ದು, ಇದರಲ್ಲಿ ನೀಮ್ ಶೆಲ್, ಗನ್ ಶೆಲ್, ಪಂಪ್, ವರ್ಕ್ಶಾಪ್ಗಳಿವೆ. ಸ್ವಾತಂತ್ರ್ಯದ ಬಳಿಕ ಇದನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಲಾಗಿತ್ತು ಎನ್ನಲಾಗಿದ್ದು, ವಿಶೇಷವೆಂದರೆ ಈ ಬಂಕರ್ನಲ್ಲಿ ಡ್ರೈನೇಜ್ ಸಿಸ್ಟಮ್ ಇದೆ. ಗಾಳಿ ಬೆಳಕು ಬರಲು ಇಂಟೆಲ್ಗಳು ಇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.