ನವದೆಹಲಿ : ಭಾರತದ ಯಾವುದೇ ಏರ್ಪೋರ್ಟ್ಗಳು ಸುರಕ್ಷಿತವಲ್ಲ. ಬ್ರುಸೆಲ್ಸ್ನಲ್ಲಿ ನಡೆದ ದಾಳಿಯ ಮಾದರಿ ನಮ್ಮ ವಿಮಾನ ನಿಲ್ದಾಣಗಳಲ್ಲಿ ದಾಳಿ ನಡೆದರೆ ಅದನ್ನು ಎದುರಿಸುವ ಸಾಮರ್ಥ್ಯ ನಮಗಿಲ್ಲ ಎಂದು ಗುಪ್ತಚರ ಇಲಾಖೆಯ ನೂತನ ವರದಿ ತಿಳಿಸಿದೆ.
ಅನುದಾನಗಳ ಕೊರತೆಯಿಂದಾಗಿ ಭಾರತದ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಪರಿಣಿತಿ ಹೊಂದಿದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ಗಳೂ ಇಲ್ಲವಾಗಿದೆ.
ಬ್ರುಸೆಲ್ಸ್ ಮತ್ತು ಇಸ್ತಾಂಬುಲ್ ವಿಮಾನ ನಿಲ್ದಾಣಗಳ ಮೇಲೆ ಇತ್ತೀಚೆಗೆ ನಡೆದ ದಾಳಿಯ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಗೃಹ ಸಚಿವಾಲಯ ದೇಶದ ಎಲ್ಲಾ ವಿಮಾನ ನಿಲ್ದಾಣಗಳ ಸೆಕ್ಯುರಿಟಿ ಆಡಿಟ್ ನಡೆಸುವಂತೆ ಆದೇಶ ನೀಡಿದೆ.
ಇದರ ವರದಿಯನ್ನು ಸಿಐಎಸ್ಎಫ್, ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಬ್ಯುರೋ ಮುಂತಾದವನ್ನೊಳಗೊಂಡ ಮಾಹಿತಿ ಏಜೆನ್ಸಿ ಕಮಿಟಿ ನಾಗರಿಕ ವಿಮಾನ ಸಚಿವಾಲಯಕ್ಕೆ ಸಲ್ಲಿಕೆ ಮಾಡಲಿದೆ.
ಸಿಐಎಸ್ಎಫ್ಗಳು ದೇಶದ ಎಲ್ಲಾ ವಿಮಾನ ನಿಲ್ದಾಣಗಳನ್ನು ಕಾವಲು ಕಾಯುವಂತೆ ಸಚಿವಾಲಯಕ್ಕೆ ಶಿಫಾರಸ್ಸು ಮಾಡಲಿದೆ. ದೇಶದ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಸಿಆರ್ಪಿಎಫ್, ಐಆರ್ಬಿ, ರಾಜ್ಯ ಪೊಲೀಸ್ ಘಟಕಗಳು ಕಾವಲು ಕಾಯುತ್ತವೆ. ಅತ್ಯಂತ ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲೂ ಸಿಐಎಸ್ಎಫ್ ಭದ್ರತೆ ಇಲ್ಲದಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಬ್ರುಸೆಲ್ಸ್ ದಾಳಿ ಬಳಿಕ ಭಾರತದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.