ರಿಯೋ ಡಿ ಜನೈರೋ: ಭಾರತದ ಪಿ.ವಿ. ಸಿಂಧು ರಿಯೋ ಒಲಿಂಪಿಕ್ಸ್ 2016ರ ಬ್ಯಾಡ್ಮಿಂಟನ್ನ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅವರು ವಿಶ್ವ ನಂಬರ್ 2 ಶ್ರೇಯಾಂಕಿತೆ ಚೀನಾದ ವಾಂಗ್ ಯಿಹಾನ್ ಅವರನ್ನು 22-20, 21-19 ನೇರ ಸೆಟ್ಗಳಿಂದ ಮಣಿಸುವ ಮೂಲಕ ಸೆಮೀಸ್ ತಲುಪಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ್ತಿಯಾದ್ದಾರೆ. 2012ರ ಒಲಿಂಪಿಕ್ಸ್ನಲ್ಲಿ ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ್ದರು.
ಆರಂಭದಲ್ಲಿ ನಿಧಾನಗತಿಯ ಆಟವಾಡಿದ ಸಿಂಧು, ನಂತರ ಶೀಘ್ರದಲ್ಲೇ ಚೀನೀ ಶಟ್ಲರ್ ವಿರುದ್ಧದ ಅಂತರವನ್ನು ಕಡಿಮೆಗೊಳಿಸಿ ತೀವ್ರ ಪೈಪೋಟಿ ನೀಡಿದರು.
ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು ವಿಶ್ವ ನಂ.6ನೇ ಶ್ರ್ರೇಯಾಂಕಿತೆ ಜಪಾನ್ನ ನೊಝೋಮಿ ಒಕುಹಾರಾ ಅವರನ್ನು ಎದುರಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.