ನವದೆಹಲಿ : 2017 ರ ಹಣಕಾಸು ವರ್ಷದಿಂದ ಕೇಂದ್ರ ಸರ್ಕಾರ ಪ್ರತ್ಯೇಕ ರೈಲ್ವೇ ಬಜೆಟ್ನ್ನು ಮಂಡನೆಗೊಳಿಸದೇ ಇರಲು ನಿರ್ಧರಿಸಿದೆ. ಈ ಮೂಲಕ 92 ವರ್ಷಗಳ ರೈಲ್ವೆ ಬಜೆಟ್ಗೆ ಅಂತ್ಯ ಬೀಳಲಿದೆ.
ಕೇಂದ್ರ ಬಜೆಟ್ನೊಂದಿಗೇ ರೈಲ್ವೆ ಬಜೆಟ್ನ್ನು ವಿಲೀನಗೊಳಿಸಲು ಹಣಕಾಸು ಸಚಿವಾಲಯ ಒಪ್ಪಿಕೊಂಡಿದೆ.
ಈ ಬಗ್ಗೆ ಯೋಜನೆ ರೂಪಿಸುವ ಸಲುವಾಗಿ 5 ಸದಸ್ಯರ ಸಮಿತಿಯನ್ನು ರಚಿಸಲು ಅದು ಮುಂದಾಗಿದೆ.
ನೀತಿ ಆಯೋಗದ ಇಬ್ಬರನ್ನೊಳಗೊಂಡ ಸಮಿತಿ ಇತ್ತೀಚೆಗೆ ರೈಲ್ವೆ ಬಜೆಟ್ಗೆ ಅಂತ್ಯ ಹಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ರೈಲ್ವೆ ಬಜೆಟ್ನ್ನು ಅಂತ್ಯಗೊಳಿಸುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.