ಚಂಡೀಗಢ: ಹರ್ಯಾಣ ಕ್ರೀಡಾ ಸಚಿವ ಅನಿಲ್ ವಿಜ್ ಮತ್ತವರ 9 ಸದಸ್ಯರ ನಿಯೋಗ ರಾಜ್ಯದ ಕ್ರೀಡಾಪಟುಗಳನ್ನು ರಿಯೋ ಒಲಿಂಪಿಕ್ಸ್ 2016 ರಲ್ಲಿ ಹುರಿದುಂಬಿಸಲು ರಿಯೋಗೆ ತೆರಳಲು ಬ್ರೆಜಿಲ್ಗೆ ಪ್ರಯಾಣಿಸಲಿದ್ದಾರೆ. ಈ ಬಗ್ಗೆ ಸಚಿವ ಅಮಿಲ್ ವಿಜ್ ಅವರು ಟ್ವೀಟ್ ಮಾಡಿದ್ದು, ಪ್ರವಾಸದ ವೆಚ್ಚ 1 ಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ.
ಸಚಿವ ವಿಜ್ ಅವರ ನಿಯೋಗವು ಅವರ ಆಪ್ತ ಕಾರ್ಯದರ್ಶಿ, ಇಬ್ಬರು ಶಾಸಕರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕ್ರೀಡೆ), ಕೆ.ಕೆ. ಖಂಡೇಲ್ವಾಲ್, ಖಂಡೇಲ್ವಾಲ್ ಅವರ ಆಪ್ತ ಕಾರ್ಯದರ್ಶಿ, ಕ್ರೀಡಾ ಜಂಟಿ ನಿರ್ದೇಶಕ ಒ.ಪಿ. ಶರ್ಮಾ ಅವರನ್ನು ಒಳಗೊಂಡಿದೆ.
ಕ್ರೀಡಾ ಜಂಟಿ ನಿರ್ದೇಶಕ ಒ.ಪಿ. ಶರ್ಮಾ ಭಾರತದ ರಾಷ್ಟ್ರೀಯ ತಂಡದ ಮಾಜಿ ಆಟಗಾರರಾಗಿದ್ದಾರೆ.
ವಿಜ್ ಅವರ ನಿಯೋಗವು ಭಾನುವಾರ ರಿಯೋಗೆ ಪ್ರಯಾಣ ಬೆಳೆಸಲಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ 119 ಆಟಗಾರರಲ್ಲಿ 20 ಆಟಗಾರರು ಹರ್ಯಾಣದವರಾಗಿದ್ದು, ಇದು ಯಾವುದೇ ರಾಜ್ಯದಿಂದ ಸ್ಪರ್ಧಿಸುವ ಆಟಗಾರರ ಗರಿಷ್ಟ ಸಂಖ್ಯೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.