ನವದೆಹಲಿ: ಪಶ್ಚಿಮ ಏಷ್ಯಾ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ದೃಷ್ಟಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಂ.ಜೆ. ಅಕ್ಬರ್ ಆಗಸ್ಟ್ 17-23ರ ನಡುವೆ ಸಿರಿಯಾ, ಇರಾಕ್, ಲೆಬಾನನ್ಗೆ ಭೇಟಿ ನೀಡಲಿದ್ದಾರೆ.
ಈ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸಲು ಹಾಗೂ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯ ವೃದ್ಧಿಸಲು ಅಕ್ಬರ್ ಅವರು ಭೇಟಿ ನೀಡಲಿದ್ದಾರೆ ಎಂದು ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದದ್ದಾರೆ.
ಲೆಬನನ್ನ ಉನ್ನತ ಅಧಿಕರಿಗಳನ್ನು ಭೇಟಿ ಮಾಡಲಿರುವ ಸಚಿವ ಅಕ್ಬರ್, ಲಿಬಾನನ್ ಪ್ರಧಾನಿ ತಮಾಮ್ ಸಲಾಮ್, ಸಂಸತ್ ಸ್ಪೀಕರ್ ನಬೀಹ್ ಬೆರಿ ಜೊತೆ ದ್ವಿಪಕ್ಷೀಯ, ಪ್ರಾದೇಶಿಕ, ಅಂತಾರಾಷ್ಟ್ರೀಯ ಮಾತಕತೆ ನಡೆಸಲಿದ್ದಾರೆ.
ಸಿರಿಯ ಪ್ರಧಾನಿ ಇಮದ್ ಮೊಹಮ್ಮದ್ ದೇಬ್ ಖಮಿ ಹಾಗೂ ಅಧ್ಯಕ್ಷ ಬಶಾರ್ ಅಲ್ ಆಸ್ಸಾದ್ ಜೊತೆ ದ್ವಿಪಕ್ಷೀಯ ಸಹಕಾರ ಹಾಗೂ ಭದ್ತೆ ಕುರಿತು ಚರ್ಚಿಸಲಿದ್ದಾರೆ. ಇರಾಕ್ ವಿದೇಶಂಗ ಸಚಿವರೊಂದಿಗೆ ಪರಸ್ಪರ ಹಿತಾಸಕ್ತಿಯ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಇದು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ವೃದ್ಧಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.