ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರ್ ವತಿಯಿಂದ ನೌಕರರ ವಸತಿ ನಿಲಯದ ಸಭಾಂಗಣದಲ್ಲಿ ಹತ್ತು ದಿನಗಳವರೆಗೆ ಆಯೋಜಿಸಿದ್ದ ಪತಂಜಲಿ ಉಚಿತ ಯೋಗ ಶಿಬಿರವು 10-08-2016 ರಂದು ಸಮಾರೋಪಗೊಂಡಿತು.
ಸಮಾರೋಪದ ಪ್ರಾಸ್ತಾವಿಕ ಭಾಷಣ ಮಾಡಿದ ರಿಕ್ರಿಯೇಷನ್ ಸೆಂಟರ್ನ ಅಧ್ಯಕ್ಷ ಶ್ರೀ ಶೇಖರ ಪೂಜಾರಿಯವರು ಈ ಯೋಗ ಶಿಬಿರ ಶ್ರೀ ಬಾಬ ರಾಮ್ ದೇವ್ ರವರ ಯೋಗ ಶಿಬಿರದ ಕಲ್ಪನೆಯನ್ನು ನೀಡಿತು, ಹಾಗೂ ಯೋಗ ತರಬೇತಿಗೆ ಸಹಕರಿಸಿದ ಕ್ಯಾಂಪ್ಕೋ ಆಡಳಿತ ಮಂಡಲಿ ,ಹಿರಿಯ ಅಧಿಕಾರಿಗಳು ಹಾಗೂ ಶಿಬಿರಾರ್ಥಿಗಳನ್ನು ಅಭಿನಂದಿಸಿದರು.
ಅತಿಥಿಗಳಾದ ಶ್ರೀ ಕರುಣಾಕರ ಶೆಟ್ಟಿಗಾರ್ ಯೋಗದ ಪ್ರಾಚೀನ ಮಹತ್ವವನ್ನು ತಿಳಿಸಿದರು. ಮುಖ್ಯ ಯೋಗ ಗುರುಗಳಾದ ಶ್ರೀ ಮಹಾಲಿಂಗೇಶ್ವರ ಭಟ್ಟರು ಮಾತನಾಡಿ ಯೋಗದ ನೈಜ ಉಪಯೋಗವನ್ನು ಮತ್ತು ಯೋಗದಿಂದ ಸರಳ ಜೀವನ ಕ್ರಮವನ್ನು ತಿಳಿಸಿದರು. ಶ್ರೀ ಪ್ರಸನ್ನರವರು ಪ್ರಾಣಿ, ಪಕ್ಷಿಗಳು ಯೋಗವನ್ನು ತಮ್ಮದೇ ರೀತಿಯಲ್ಲಿ ಮಾಡುವುದರಿಂದ ಅವು ಮನುಷ್ಯರಿಗಿಂತ ಸದೃಢವಾಗಿದೆ ಎಂದರು. ಶ್ರೀಮತಿ ಪೂರ್ಣಿಮ ಡೋಂಗ್ರೆ, ಶ್ರೀಮತಿ ಶಾಂತಿ ಹೊಳ್ಳ, ಶ್ರೀಮತಿ ಶಕುಂತಳಾ, ಶ್ರೀಮತಿ ಶುಭಾ.ಕೆ.ರಾವ್, ಶ್ರೀ ರಂಗನಾಥ್ , ಶ್ರೀ ಅನುಪ್ ಮತ್ತು ಶ್ರೀ ಕೆ.ಸಿ.ರಾವ್ ಶಿಬಿರಾರ್ಥಿಗಳ ಪರ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಯೋಗ ಪಟು ಶ್ರೀಮತಿ ವೀಣಾ ವಿಶ್ವನಾಥ್ ಉಪಸ್ಥಿತರಿದ್ದರು. ರಿಕ್ರೀಯೇಷನ್ ಸೆಂಟರಿನ ಸೆಕ್ರೆಟರಿ ಶ್ರೀ ಸಂತೋಷ್ ಕುಮಾರ್ ಸಿ.ಎಚ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.