ಬೆಂಗಳೂರು : ಇತ್ತೀಚೆಗೆ ಪಠಾಣ್ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿಯ ಸಂದರ್ಭ ಹುತಾತ್ಮರಾದ ಎನ್ಎಸ್ಜಿ ಕಮಾಂಡೋ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ನಿವಾಸವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಭಾಗಶಃ ಕೆಡವಿ ಹಾಕಿದೆ.
ಅನಧಿಕೃತ ಸ್ಥಳದಲ್ಲಿ ಈ ನಿವಾಸವಿದೆಯೆಂದು ಆರೋಪಿಸಿ ಹುತಾತ್ಮ ಯೋಧನ ನಿವಾಸದ ಧ್ವಂಸಕ್ಕೆ ಮುಂದಾಗಿರುವ ಬಿಬಿಎಂಪಿ ವಿರುದ್ಧ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.
ಆದರೆ ಬಿಬಿಎಂಪಿಯ ಈ ಕ್ರಮವನ್ನು ಸಿಎಂ ಸಿದ್ದರಾಮಯ್ಯನವರು ಸಮರ್ಥಿಸಿಕೊಂಡಿದ್ದಾರೆ.
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇದನ್ನು ಖಂಡಿಸಿದ್ದು, ಕನಿಷ್ಟ ಪಕ್ಷ ಹುತಾತ್ಮ ಯೋಧನ ಕುಟುಂಬಕ್ಕಾದರೂ ಗೌರವ ನೀಡಬೇಕಿತ್ತು. ನಿರಂಜನ್ ಅವರು ಪಠಾಣ್ಕೋಟ್ ದಾಳಿಯಲ್ಲಿ ನಮಗಾಗಿ ಪ್ರಾಣ ತ್ಯಾಗ ಮಾಡಿದ್ದರು ಎಂದಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರು ನಿರಂಜನ್ ಅವರ ಕುಟುಂಬಕ್ಕೆ ಮನೆ ಕಟ್ಟಲು ಬೇರೆ ಕಡೆ ನಿವೇಶನ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಎನ್ಎಸ್ಜಿಯ ಬಾಂಬ್ ನಿಷ್ಕ್ರಿಯ ದಳದಲ್ಲಿದ್ದ ನಿರಂಜನ್ ಅವರು ಪಠಾಣ್ಕೋಟ್ ದಾಳಿಯ ಬಳಿಕ ನಡೆದ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಗ್ರೆನೇಡ್ ಅನ್ನು ನಿಷ್ಕ್ರಿಯಗೊಳಿಸುತ್ತಿದ್ದಾಗ ಅದು ಸ್ಫೋಟಗೊಂಡು ಸಾವನ್ನಪ್ಪಿದ್ದರು.
ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಬಿಬಿಎಂಪಿ ಹಲವಾರು ಅನಧಿಕೃತ ಕಟ್ಟಡಗಳನ್ನು ಕೆಡವುತ್ತಿದೆ. ಒಟ್ಟು 1,100 ಮನೆಗಳನ್ನು ಕೆಡವಲು ಅದು ಮಾರ್ಕ್ ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.