ನವದೆಹಲಿ: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ತಮ್ಮ ಭಾಷಣಕ್ಕೆ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ.
ಆಗಸ್ಟ್ 15ರ ಪ್ರಧಾನಿ ಭಾಷಣಕ್ಕೆ ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ ಎಂದು ಪ್ರಧಾನಿ ಸಚಿವಾಲಯ ಟ್ವೀಟ್ ಮಾಡಿದೆ.
ತಮ್ಮ ಸೈಟ್ನಲ್ಲಿ ವೀಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಸ್ವಾತಂತ್ರ್ಯ ದಿನಾಚರಣೆ ಕೇವಲ ಸರ್ಕಾರದ ಹಬ್ಬವಲ್ಲ. ಇದು ದೀಪಾವಳಿಯಂತೆ ದೇಶದ ಹಬ್ಬವಾಗಬೇಕು ಎಂದು ಹೇಳಿದ್ದಾರೆ.
ಸಂಪ್ರದಾಯದಂತೆ ಆ.15ರಂದು ಭಾಷಣ ದೇಶದ ಎದುರು ಮಾಡಲು ನನಗೆ ಅವಕಾಶ ದೊರೆಯುತ್ತದೆ. ನೀವೂ ಕೆಲವು ವಿಚಾರಗಳನ್ನು ದೇಶದ ಮುಂದಿಡಲು ಬಯಸಿರಬಹುದು. ಓರ್ವ ಪ್ರಧಾನ ಸೇವಕನಾಗಿ ನಿಮ್ಮ ವಿಚಾರಗಳನ್ನು ಕಳುಹಿಸಲು ಆಹ್ವಾನಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನೀವು ನಿಮ್ಮ ವಿಚಾರ, ಸಲಹೆಗಳನ್ನು ಪ್ರಧಾನಿ ಮೋದಿಯವರ ನರೇಂದ್ರ ಮೋದಿ ಆಪ್ ಅಥವಾ ಗೆ ಕಳುಹಿಸಬಹುದು ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.