ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ತಿರಂಗಾ ಯಾತ್ರೆಯನ್ನು ಆಯೋಜನೆ ಮಾಡಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಈ ತಿರಂಗಾ ಯಾತ್ರೆಗೆ ಸಂಸದರುಗಳು ಮೋಟಾರ್ಸೈಕಲ್ನಲ್ಲಿ ಬರಬೇಕು ಎಂದು ಆದೇಶಿಸಲಾಗಿದೆ. ಈ ನಿಯಮ ಮಹಿಳೆ ಮತ್ತು ಪುರುಷರೆಲ್ಲರಿಗೂ ಅನ್ವಯವಾಗಲಿದೆ.
ಸಚಿವರುಗಳು ಮೋಟಾರ್ಬೈಕ್ನಲ್ಲಿ ತ್ರಿವರ್ಣಗಳನ್ನು ಹೊಂದಿರುವ ಹೆಲ್ಮೆಟ್ ಧರಿಸಿ, 8 ಅಡಿ ಎತ್ತರ ತ್ರಿವರ್ಣ ಧ್ವಜವನ್ನು ಹೊತ್ತೊಯ್ಯಲಿದ್ದಾರೆ.
ನಿನ್ನೆ ನಡೆದ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದರಿಗೆ ಎಲ್ಲಾ ಮಾಹಿತಿಗಳನ್ನು ಮಾಡಿದರು. ಅಲ್ಲದೆ ಯಾತ್ರೆ ಸಂದರ್ಭ ಕೈಗೊಳ್ಳಲಾಗುವ ಚಟುವಟಿಕೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಆನ್ಲೈನ್ ಮೂಲಕ ಪ್ರತಿನಿತ್ಯ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಯಾತ್ರೆಗೆ ಭಾಗವಹಿಸಿರುವುದಕ್ಕೆ ಸಾಕ್ಷಿಯಾಗಿ ಫೇಸ್ಬುಕ್ನಲ್ಲಿ ಯಾತ್ರೆಯ ಚಟುವಟಿಕೆಗಳ ಬಗೆಗಿನ 500-1000 ಫೋಟೋಗಳನ್ನು ಪೋಸ್ಟ್ ಮಾಡುವಂತೆ ಸೂಚಿಸಿದ್ದಾರೆ.
ಮೋಟಾರ್ ಸೈಕಲ್ಗಳು ಜನಸಾಮಾನ್ಯರನ್ನು ಸಂಕೇತಿಸುತ್ತದೆ. ಈ ಕಾರಣದಿಂದಾಗಿ ಯಾತ್ರೆಗೆ ಕಾರಿನ ಬದಲು ಮೋಟಾರ್ಸೈಕಲ್ನಲ್ಲಿ ಬರುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.
ಆಗಸ್ಟ್ 15 ರಿಂದ 23 ರವರೆಗೆ ತಿರಂಗಾ ಯಾತ್ರೆ ನಡೆಯಲಿದ್ದು, ಕೇಂದ್ರದ 75 ಸಚಿವರುಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ 150 ಸ್ಥಳಗಳಿಗೆ ಭೇಟಿ ಕೊಡಲಿದ್ದಾರೆ.
7 ಮಹಿಳೆಯರು ಗಡಿಗೆ ತೆರಳಿ ಸೈನಿಕರಿಗೆ ರಾಖಿ ಕಟ್ಟಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.