ಚೆನ್ನೈ: ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ತಮಿಳುನಾಡು ಸಿಎಂ ಜಯಲಲಿತಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಕೂಡಂಕುಳಂ ಅಣು ವಿದ್ಯುತ್ ಘಟಕವನ್ನು ಬುಧವಾರ ಜಂಟಿಯಾಗಿ ಲೋಕಾರ್ಪಣೆ ಮಾಡಿದರು.
ಕೂಡಂಕುಳಂ ಪರಮಾಣು ಘಟಕ ಭಾರತ ಮತ್ತು ರಷಯಾ ನಡುವೆ ಐತಿಹಾಸಿಕ ಒಪ್ಪಂದವನ್ನು ಗುರುತಿಸಿದೆ. ಇಂದಿನ ಈ ಕಾರ್ಯಕ್ರಮ ಭಾರತ ಮತ್ತು ರಷ್ಯಾದ ಇಂಜಿನನಿಯರ್ಗಳಿಗೆ ಸಂತೋಷದಾಯಕ. ಈ ಸಂದರ್ಭದಲ್ಲಿ ಅವರ ಶ್ರಮದ ಕಾರ್ಯಕ್ಕೆ ಅವರಿಗೆ ನನ್ನ ಸೆಲ್ಯೂಟ್ ಎಂದು ಮೋದಿ ಹೇಳಿದ್ದಾರೆ.
ಭಾರತ-ರಷ್ಯಾ ನಡುವಿನ ಕೂಡಂಕುಳಂ ಯೋಜನೆ ಭಾರತದಲ್ಲಿ ಸ್ವಚ್ಛ ಣುವಿದ್ಯುತ್ ಉತ್ಪಾದನೆಯ ನಿರಂತರ ಪ್ರಯತ್ನಗಳ ಮಹತ್ವದ ಸೇರ್ಪಡೆಯಾಗಿದೆ. ಭಾರತ ಮತ್ತು ರಷ್ಯಾದ ಸ್ನೇಹ ಸಂಬಂಧಗಳಿಗೆ ನಾನು ಹೆಚ್ಚಿನ ಮೌಲ್ಯವನ್ನು ನೀಡಿದ್ದೇನೆ. ಕೂಡಂಕುಳಂ ಪರಮಾಣು ಘಟಕವನ್ನು ನಾವು ಜಂಟಿಯಾಗಿ ಅರ್ಪಿಸುತ್ತಿದ್ದೇವೆ. ಇದು ನಮ್ಮ ‘ಗ್ರೀನ್ ಗ್ರೋತ್’ ನಿರ್ಮಿಸುವ ಜಂಟಿ ಪಾಲುದಾರಿಕೆಯ ಬದ್ಧತೆಯನ್ನು ಸೂಚಿಸುತ್ತದೆ ಎಂದು ಮೋದಿ ಈ ವೇಳೆ ಹೇಳಿದ್ದಾರೆ.
ಮಾಸ್ಕೋದಿಂದ ಕಾನ್ಫರೆನ್ಸ್ ಮೂಲಕ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ಇದು ನಮಗೆಲ್ಲರಿಗೂ ಒಂದು ಅತಿದೊಡ್ಡ ಕಾರ್ಯಕ್ರಮವಾಗಿದೆ ಎಂದು ಹೇಳಿದ್ದಾರೆ.
ಕೂಡಂಕುಳಂ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ನಲ್ಲಿ ಸಮಾರಂಭ ನಡೆಯಲಿದ್ದು, ಇದರ ಮುಖ್ಯಸ್ಥ ಎಸ್ಕೆ ಶರ್ಮಾ, ರಷ್ಯಾ ಕಂಪನಿಯ ಆಂಟೋಂಸ್ರಾಯ್ ಎಕ್ಸ್ಪೋರ್ಟ್ ತಜ್ಞ ಲಿಮರಿಂಕೋ ಮತ್ತು ಸೈಟ್ ನಿರ್ದೇಶಕ ಸುಂದರ್ ಇದರಲ್ಲಿ ಭಾಗವಹಿಸಿದ್ದರು.
2013ರ ಜುಲೈನಲ್ಲೇ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್ನ ಮೊದಲ ಯುನಿಟ್ ಆರಂಭವಾಗಿದ್ದು, ಈವರೆಗೆ 10,800 ಮಿಲಿಯನ್ ಯುನಿಟ್ ಪವರ್ ಉತ್ಪಾದನೆ ಮಾಡಲಾಗಿದೆ.
1000 ಮೆಗಾವ್ಯಾಟ್ ಕೂಡಂಕುಳಂ ನ್ಯೂಕ್ಲಿಯರ್ ಪವರ್ ಪ್ಲಾಂಟ್ನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋವಿಯತ್ ನಾಯಕ ಮಿಕಾಹಿಲ್ ಗೋರ್ಬಚೆವ್ ಅವರ ನಡುವೆ ೧೯೮೮ ರ ನವೆಂಬರ್ನಲ್ಲಿ ಏರ್ಪಟ್ಟ ಒಪ್ಪಂದದಂತೆ ರಷ್ಯಾ ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.