ಕೋಟಾ : ಇಲ್ಲಿನ ಶಾಲಾ ಮಕ್ಕಳು ತಮ್ಮ ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಸಲುವಾಗಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ತಮ್ಮ ಮನೆಗಳಲ್ಲಿನ ಕಸದ ಬುಟ್ಟಿಗಳಲ್ಲಿರುವ ಪ್ಲಾಸ್ಟಿಕ್ ಪಾಲಿಥಿನ್ಗಳನ್ನು ನೇರವಾಗಿ ಶಾಲೆಗೆ ತೆಗೆದುಕೊಂಡು ಬರುತ್ತಿದ್ದಾರೆ. ಈ ಪ್ಲಾಸ್ಟಿಕ್ಗಳನ್ನು ಬಳಿಕ ಕಸದ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಮೂಲಕ ರಸ್ತೆಯಲ್ಲಿ ಪ್ಲಾಸ್ಟಿಕ್ ಬೀಳದಂತೆ ಎಚ್ಚರಿಕೆ ವಹಿಸುವ ಗುರಿ ವಿದ್ಯಾರ್ಥಿಗಳದ್ದು.
ಅವರು ಕೈಗೊಂಡಿರುವ ಈ ಅಭಿಯಾನ ಯಶಸ್ಸಾದರೆ ಕೋಟಾ ನಗರ ಮತ್ತು ಚಂಬಲ್ ನದಿ ಪ್ಲಾಸ್ಟಿಕ್ ಮುಕ್ತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮನೆಗಳಲ್ಲಿನ ಪ್ಲಾಸ್ಟಿಕ್ ರಸ್ತೆಯಲ್ಲಿ ಬೀಳಬಾರದು. ರಸ್ತೆಗಳು ಸ್ವಚ್ಛವಾಗಿರಬೇಕು ಎಂಬ ಸದುದ್ದೇಶದಿಂದಲೇ ಮಕ್ಕಳು ಪ್ಲಾಸ್ಟಿಕ್ ಮತ್ತು ಪಾಲಿಥೀನ್ಗಳನ್ನು ಶಾಲೆಗೆ ತೆಗೆದುಕೊಂಡು ಬಂದು ಮಾರಾಟ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅಂಕ, ಹಣವೂ ದೊರೆಯುತ್ತದೆ. ಮಾತ್ರವಲ್ಲ ಕೋಟಾ ನಗರವೂ ಸ್ವಚ್ಛವಾಗುತ್ತಿದೆ.
ಪೊಲ್ಯೂಷನ್ ಫ್ರೀ ಅರ್ಥ್ ಎಂಬ ಹೆಸರಿನಲ್ಲಿ ಪುಣೆಯಲ್ಲಿ ಯೋಜನೆಯೊಂದನ್ನು ಆರಂಭಿಸಲಾಗಿದ್ದು, ಅದು ಬಹಳಷ್ಟು ಯಶಸ್ಸು ಕಂಡಿದೆ. ಈ ಯೋಜನೆಗೆ ಹಲವಾರು ಶಾಲೆಗಳು ಒಳಪಟ್ಟಿವೆ.
ಕಳೆದ ತಿಂಗಳು ಒಟ್ಟು 2,250 ಕೆ.ಜಿ. ಪ್ಲಾಸ್ಟಿಕ್ ಅನ್ನು ರಿಸೈಕ್ಲಿಂಗ್ಗೆ ನೀಡಲಾಗಿದೆ. ವಿವಿಧ ಶಾಲೆಗಳ 5 ಸಾವಿರ ವಿದ್ಯಾರ್ಥಿಗಳು ಈ ಪ್ಲಾಸ್ಟಿಕ್ಗಳನ್ನು ಸಂಗ್ರಹ ಮಾಡಿದ್ದರು.
ಪ್ಲಾಸ್ಟಿಕ್ ಅನ್ನು ತಿಂದರೆ ಗೋವುಗಳು ಸಾಯುತ್ತವೆ. ಪ್ಲಾಸ್ಟಿಕ್ ನದಿಗೆ ಬಿದ್ದರೆ ಮೀನುಗಳು ಸಾಯುತ್ತವೆ ಮತ್ತು ನದಿ ಮಾಲಿನ್ಯಗೊಳ್ಳುತ್ತದೆ. ಈಗಾಗಲೇ ಹಲವಾರು ಕಡೆ ಪ್ಲಾಸ್ಟಿಕ್ ಅನ್ನು ನಿಷೇಧಿಸಿ ನೋಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾವು ನಮ್ಮ ಹವ್ಯಾಸವನ್ನು ಬದಲಾಯಿಸಲು ನಿರ್ಧರಿಸಿದೆವು. ಮನೆಯಲ್ಲಿನ ಪ್ಲಾಸ್ಟಿಕ್ ಕಸಗಳನ್ನು ಹೊರಕ್ಕೆ ಹಾಕುವ ಬದಲು ನೇರವಾಗಿ ವ್ಯಾಪಾರಿಗಳಿಗೆ ರೀಸೈಕ್ಲಿಂಗ್ಗೆ ಮಾರಾಟ ಮಾಡುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳು ಅಂಕ, ಹಣ ಗಳಿಸುತ್ತಿದ್ದಾರೆ. ಮಾತ್ರವಲ್ಲದೆ ಸ್ವಚ್ಛತೆಯನ್ನೂ ಮಾಡುತ್ತಿದ್ದಾರೆ ಎಂದು ತಲವಾಂಡಿಯ ಇಮ್ಯಾನ್ಯುಲ್ ಮಿಷನ್ ಸ್ಕೂಲ್ನ ಮ್ಯಾನೇಜರ್ ದೇವ್ನ ಚಂಡೆಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.