ನವದೆಹಲಿ: ಹಲವು ವಿಮಾನಯಾನಗಳು ಮಂಗಳವಾರ ಪ್ರಯಾಣಿಕರಿಗಾಗಿ ರಿಯಾಯಿತಿ ದರಗಳನ್ನು ಘೋಷಿಸಿವೆ.
ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಲಯಗಳ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ರಿಯಾಯಿತಿ ದರಗಳನ್ನು ಘೋಷಿಸಿದೆ.
ಈ ರಿಯಾಯಿತಿ ದರಗಳು ಆಗಸ್ಟ್ 9ರಿಂದ 15ರ ವರೆಗೆ ಲಭ್ಯವಿರಲಿದ್ದು, ಪ್ರಯಾಣಿಕರು ಆರಂಭಿಕ ಐಎನ್ಆರ್ ದರ ರೂ.1,199 (ವನ್ ವೇ- ಆಂತರಿಕ ಶುಲ್ಕ ಸೇರಿ) ಮತ್ತು ರೂ. 15,999 (ಎಲ್ಲ ಶುಲ್ಕಗಳು ಸೇರಿ) ದರಗಳ ಆಯ್ದ ವಲಯಗಳ ದೇಶೀಯ ಹಾಗೂ ಅಂತಾರಾಷ್ಟ್ರೀಯ ಟಿಕೆಟ್ ಬುಕಿಂಗ್ ಮಾಡಬಹುದು ಎಂದು ಹೇಳಿದೆ.
ಈ ಯೋಜನೆಯಡಿ ಆಗಸ್ಟ್ 22ರಿಂದ ಸೆಪ್ಟೆಂಬರ್ 30ರವರೆಗೆ 250 ದೇಶೀಯ ವಲಯಗಳಲ್ಲಿ ಟಿಕೆಟ್ ಪಡೆಯಬಹುದು ಎಂದು ಏರ್ ಇಂಡಿಯಾ ಹೇಳಿದೆ.
ಅಂತಾರಾಷ್ಟ್ರೀಯ ವಲಯದಲ್ಲಿ ಆಯ್ದ ವಿಮಾನಗಳ ರಿಟರ್ನ್ ಟಿಕೆಟ್ಗಳ ಮೇಲೆ ಈ ಯೋಜನೆ ಅನ್ವಯವಾಗಲಿವೆ ಎಂದು ಏರ್ ಇಂಡಿಯಾ ಹೇಳಿದೆ.
ಸ್ಪೈಸ್ ಜೆಟ್ ತನ್ನ ‘ಗ್ರೇಟ್ ಇಂಡಿಪೆಂಡೆನ್ಸ್ ಸೇಲ್’ ಯೋಜನೆಯಡಿ ಆರಂಭಿಕ ಮೂಲ ದರ 399 ರೂ. (ಹೆಚ್ಚುವರಿ ತೆರಿಗೆ ಅನ್ವಯವಾಗುವುದು) ಅಗ್ಗದ ದರದಲ್ಲಿ ಆಯ್ದ ಸ್ಥಳಗಳ ದೇಶೀಯ ಪ್ರಯಾಣ ದರ ನಿಗದಿಪಡಿಸಿದೆ. ಇನ್ನು ಅಂತಾರಾಷ್ಟ್ರೀಯ ವಲಯದಲ್ಲಿ ನೇರ ವಿಮಾನಗಳಿಗೆ ಆರಂಭಿಕ ಮೂಲ ದರ 2,999 ರೂ. (ಹೆಚ್ಚುವರಿ ತೆರಿಗೆ ಅನ್ವಯ) ನಿಗದಿಪಡಿಸಿದೆ.
ಆಗಸ್ಟ್ 11ರ ಮಧ್ಯರಾತ್ರಿ ವರೆಗೆ ಈ ಇಂಡಿಪೆಂಡೆನ್ಸ್ ಸೇಲ್ ತೆರೆದಿರಲಿದ್ದು, ಪ್ರಯಾಣ ಅವಧಿ ಆಗಸ್ಟ್ 18ರಿಂದ ಸೆ.30ರ ವರೆಗೆ ಇರಲಿದೆ.
ವಿಮಾನಯಾನ ಇಂಡಿಗೋ ಕೂಡ ದೇಶೀಯ ಪ್ರಯಾಣಗಳ ಆರಂಭಿಕ ದರ 809ರ ರಿಯಾತಿ ದರದೊಂದಿಗೆ ಪ್ರಯಾಣ ದರಗಳನ್ನು ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.