ಅಲಿಜಾಪುರ್: ಕಳೆದ ಒಂದು ತಿಂಗಳಿನಿಂದ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಯುವಕರು ಕಲ್ಲು ಹಿಡಿಯುವ ಬದಲು ಪುಸ್ತಗಳನ್ನು, ಲ್ಯಾಪ್ ಟಾಪ್ ಹಿಡಿಯುವಂತಾಗಬೇಕು. ಪ್ರತೀ ಭಾರತೀಯ ಕಾಶ್ಮೀರವನ್ನು ಪ್ರೀತಿಸುತ್ತಾನೆ. ಪ್ರತಿಯೊಬ್ಬ ಭಾರತೀಯ ಅನುಭವಿಸುವ ಸ್ವಾತಂತ್ರ್ಯ (ಆಜಾದಿ)ವನ್ನು ಕಾಶ್ಮೀರ ಕೂಡ ಅನುಭವಿಸಲಿದೆ ಎಂದು ಪ್ರಧಾನಿ ನರೆಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಅಲಿಜಾಪುರ್ದಲ್ಲಿ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ’70 ಸಾಲ್ ಆಜಾದಿ, ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಕಾಶ್ಮೀರ ಭಾರತದ ಒಂದು ಅವಿಭಾಜ್ಯ ಅಂಗ. ಕಾಶ್ಮೀರದಲ್ಲಿ ಮಾಜಿ ಪ್ರದಾನಿ ವಾಜಪೇಯಿ ಅವರ ಪ್ರಜಾಪ್ರಭುತ್ವ ಮತ್ತು ಮಾನವೀಯತೆಯ ತತ್ವ ಅಳವಡಿಕೆಯಾಗಬೇಕು ಎಂದರು.
ಜುಲೈ ತಿಂಗಳಿನಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯ ಬಳಿಕ ಕಳೆದ ಒಂದು ತಿಂಗಳಿನಿಂದ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಹಿಂಸಾಚಾರದಲ್ಲಿ ಹೆಚ್ಚಾಗಿ ಹದಿಹರೆಯದವರೇ ಪಾಲ್ಗೊಂಡಿದ್ದು, ಕರ್ಫ್ಯೂ ಭೇದಿಸಿ ಬೀದಿಗಿಳಿದಿದ್ದರು. ಯುವಕರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ನಂತರ ಪೆಲ್ಲೆಟ್ ಗನ್ಗಳ ದಾಳಿಯಿಂದ 100ಕ್ಕೂ ಹೆಚ್ಚು ಮಂದಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ. ಯುವಕರು ಪ್ರತಿಭಟನೆ ನಡೆಸುತ್ತಿರುವುದು ಕಳವಳಕಾರಿಯಾಗಿದೆ. ಶಿಕ್ಷಣ ಪಡೆದು ಜೀವನ ರೂಪಿಸಬೇಕಿರುವ ಯುವಕರು ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಸಮಂಜಸವಲ್ಲ ಎಂದು ಮೋದಿ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಸುಮಾರು 56 ಮಂದಿ ಮೃತಪಟ್ಟು ಸುಮಾರು 3 ಸಾವಿರ ಭದ್ರತಾ ಪಡೆಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.