ಮುಂಬೈ : ಭಯೋತ್ಪಾದನೆಗೆ ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿರುವ ಮುಸ್ಲಿಂ ಮುಖಂಡ ಝಾಕಿರ್ ನಾಯಕ್ನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸಂಸ್ಥೆ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.
ಈ ಬಗ್ಗೆ ಈಗಾಗಲೇ ಕಾನೂನು ಸಚಿವಾಲಯ ಸಂಸ್ಥೆಯ ಬಗ್ಗೆ ಸರಕಾರಕ್ಕೆ ಮಾಹಿತಿ ರವಾನಿಸಿದ್ದು, ನಿಷೇಧ ಹೇರುವ ಬಗ್ಗೆ ಪ್ರಸ್ತಾಪ ಮಾಡಿದ ಎನ್ನಲಾಗಿದೆ.
1991 ರಲ್ಲಿ ಮುಂಬೈ ಮೂಲದ ಝಾಕಿರ್ ನಾಯಕ್ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸ್ಥಾಪಿಸಿ ಅದರ ಮುಖೇನ ದೇಶ ವಿದೇಶಗಳಲ್ಲಿ ಧಾರ್ಮಿಕ ಪ್ರವಚನಗಳನ್ನು, ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾನೆ.
ಪೀಸ್ ಟಿವಿ ಮೂಲಕ ಈತ ಹೆಚ್ಚು ಪ್ರಸಿದ್ಧಿಗೆ ಬಂದಿದ್ದ. ಇದೀಗ ಆತನ ಸಂಸ್ಥೆ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಕಾನೂನು ಬಾಹಿರ ಸಂಸ್ಥೆ ಎಂದು ಪರಿಗಣಿತವಾಗುವ ಸಾಧ್ಯತೆ ಇದೆ.
ಅದರ ನಿಷೇಧಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳೂ ನಡೆಯುತ್ತಿದೆ. ಸದ್ಯ ಪಶ್ಚಿಮ ಏಷ್ಯಾದಲ್ಲಿರುವ ಝಾಕಿರ್ ಬಂಧನಕ್ಕೊಳಗಾಗುವ ಭೀತಿಯಿಂದ ಭಾರತಕ್ಕೆ ಆಗಮಿಸುತ್ತಿಲ್ಲ ಎನ್ನಲಾಗಿದೆ.
ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ಸ್ಫೋಟ ನಡೆಸಿದ ಉಗ್ರರು ಝಾಕಿರ್ ನಮಗೆ ಪ್ರೇರಣೆ ಎಂದಿದ್ದರು. ಆ ಬಳಿಕ ಆತನ ವಿರುದ್ಧ ಭಾರೀ ಆಕ್ರೋಶಗಳು ಭುಗಿಲೆದ್ದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.