ನವದೆಹಲಿ: ಸರ್ಕಾರಿ ಸ್ವಾಮ್ಯದ ಲೋಹ ವ್ಯಾಪಾರ ಸಂಸ್ಥೆ ಎಂಎಸ್ಟಿಸಿ, ಮಹೀಂದ್ರ ಗ್ರೂಪ್ನ ಮಹೀಂದ್ರ ಇಂಟರ್ಟ್ರೇಡ್ ಜೊತೆ ಚಿಂದಿ ಲೋಹಗಳ (ಬಿಡಿ ಭಾಗಗಳು) ಮತ್ತು ಮರುಬಳಕೆ ಕಾರ್ಖಾನೆ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿದೆ.
ಭಾರತ ವಾರ್ಷಿಕ 200-300 ಮಿಲಿಯನ್ ಡಾಲರ್ ವೆಚ್ಚದಲ್ಲಿ ಆಮದು ಮಾಡುತ್ತಿರುವ 5-6 ಮಿಲಿಯನ್ ಟನ್ ಲೋಹದ ಆವಶ್ಯಕತೆಯನ್ನು ಪೂರೈಸುವುದು ಜಂಟಿ ಉದ್ಯಮದ ಉದ್ದೇಶವಾಗಿದೆ. ಇದಕ್ಕಾಗಿ 1.8 ಮಿಲಿಯನ್ ಡಾಲರ್ (12,000 ಕೋಟಿ) ಮಾರುಕಟ್ಟೆ ಸ್ಥಾಪಿಸಲು ಅಂದಾಜಿಸಲಾಗಿದೆ.
ಭಾರತದಲ್ಲಿ 2015ರಲ್ಲಿ ವಾಹನಗಳ ಬೇಡಿಕೆ 23.34 ಮಿಲಿಯನ್ ಇತ್ತು. ಹಳೆಯ ಎಂಡ್ ಆಫ್ ಲೈಫ್ ವಾಹನಗಳ ಲೋಹವನ್ನು ಮಾರಾಟದಿಂದ ಹೆಚ್ಚಿನ ಬೆಳವಣಿಗೆಗೆ ಅಪಾರ ಅವಕಾಶವಿದೆ ಎಂದು ಎಂಎಸ್ಟಿಸಿ ಸಿಎಚಿಡಿ ಬಿ.ಬಿ. ಸಿಂಗ್ ಹೇಳಿದ್ದಾರೆ.
ನಿರುಪಯುಕ್ತ ವಾಹನಗಳ ಚಿಂದಿ ಲೋಹದ ಬಿಡಿ ಭಾಗಗಳ ಸಂಗ್ರಹ, ಸಾಗಾಟ, ಮರು ಉತ್ಪಾದನೆ, ವಿಲೇವಾರಿಗೆ ಇದು ಉಪಯೋಗವಾಗಲಿದೆ ಎಂದು ಮಹೀಂದ್ರ ಇಂಟರ್ಟ್ರೇಡ್ನ ವ್ಯವಸ್ಥಾಪಕ ನಿರ್ದೇಶಕ ಸುಮಿತ್ ಇಸ್ಸರ್ ಹೇಳಿದ್ದಾರೆ.
ಇದರ ಮೊದಲ ಕಾರ್ಖಾನೆ ಗುಜರಾತ್ ಅಥವಾ ಮಹಾರಾಷ್ಟ್ರದಲ್ಲಿ ಸ್ಥಾಪನೆಯಾಗಲಿದ್ದು, 1-1.5 ಲಕ್ಷ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಲಿದೆ. ಇದು ಮಾರ್ಚ್ 2018ರಿಂದ ಉತ್ಪಾದನೆ ಪ್ರಾರಂಭಿಸಲಿದೆ ಎಂದು ಇಸ್ಸರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.