ನವದೆಹಲಿ : ಬಹು ನಿರೀಕ್ಷಿತ ಜಿಎಸ್ಟಿ ಮಸೂದೆಯನ್ನು ಲೋಕಸಭೆಯಲ್ಲೂ ಸೋಮವಾರ ಮಂಡಿಸಲಾಗಿದೆ. 6 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಸಂಸತ್ತಿನ 443 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರು. ಎಐಎಡಿಎಂಕೆ ಸದಸ್ಯರು ಮಾತ್ರ ಇದನ್ನು ವಿರೋಧಿಸಿ ಕಲಾಪವನ್ನು ಬಹಿಷ್ಕರಿಸಿದರು.
ಮಸೂದೆ ಮಂಡನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಸೂದೆ ಜಾರಿಗೆ ಬೆಂಬಲ ನೀಡಿದ ಎಲ್ಲಾ ಪಕ್ಷಗಳಿಗೂ ಧನ್ಯವಾದ ಅರ್ಪಿಸಿದರು. ಜಿಎಸ್ಟಿಗೆ ಸಿಕ್ಕ ಬೆಂಬಲ ಪ್ರಜಾಪ್ರಭುತ್ವದ ಪ್ರಬುದ್ಧತೆಯನ್ನು ತೋರಿಸಿದೆ. ಇಂದು ಸಂಸತ್ತು ಸಂಖ್ಯೆಗಿಂತ ಒಮ್ಮತ ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ತೆರಿಗೆ ಭಯೋತ್ಪಾದನೆ, ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತಡೆಗಟ್ಟಲು ಈ ಮಸೂದೆಯ ಜಾರಿ ಅತ್ಯವಶ್ಯಕವಾಗಿತ್ತು. ಇದು ಗ್ರಾಹಕರನ್ನು ರಾಜರನ್ನಾಗಿಸಲಿದೆ. ಆರ್ಥಿಕತೆಯನ್ನು ಪರಿವರ್ತಿಸಲು, ಪಾರದರ್ಶಕತೆ ತರಲು ಮತ್ತು ಒಂದು ದೇಶ ಒಂದು ತೆರಿಗೆ ಜಾರಿಗೆ ಟೀಂ ಇಂಡಿಯಾ ಇಟ್ಟ ಅತಿ ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದರು.
ಮಸೂದೆ ಜಾರಿ ಯಾವುದೇ ಪಕ್ಷ ಅಥವಾ ಸರಕಾರಕ್ಕೆ ಸಿಕ್ಕ ಯಶಸ್ಸಲ್ಲ. ಇದು ದೇಶದ ಪ್ರತಿಯೊಬ್ಬನಿಗೂ ಸಂದ ಯಶಸ್ಸು. ಭಾರತದ ಪ್ರಜಾಪ್ರಭುತ್ವದ ಯಶಸ್ಸು ಎಂದು ವಿಶ್ಲೇಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.