ಅಲಹಾಬಾದ್ : ಉತ್ತರ ಪ್ರದೇಶದ ಶಾಲೆಯೊಂದು ಕಳೆದ ೧೨ ವರ್ಷಗಳಿಂದ ರಾಷ್ಟ್ರಗೀತೆ ಹಾಡುವುದಕ್ಕೆ ನಿಷೇಧ ಹೇರಿದೆ. ಈ ಮೂಲಕ ದೇಶದ ಗೌರವಕ್ಕೆ ಚ್ಯುತಿ ತಂದಿದೆ.
ಶಾಲಾ ಆಡಳಿತ ಮಂಡಳಿಯ ಈ ಧೋರಣೆಯನ್ನು ಖಂಡಿಸಿ ಅಲ್ಲಿನ ಪ್ರಾಂಶುಪಾಲರು ಸೇರಿದಂತೆ ಒಟ್ಟು 8 ಶಿಕ್ಷಕರು ರಾಜೀನಾಮೆ ಸಲ್ಲಿಸಿದ್ದಾರೆ.
ಸ್ವಾತಂತ್ರ್ಯ ದಿನದಂದು ಇಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತಿಲ್ಲ. ಇಲ್ಲಿನ ಹೆಚ್ಚಿನ ಶಿಕ್ಷಕರು ಇತ್ತೀಚೆಗೆ ಕೆಲಸಕ್ಕೆ ಸೇರಿದವರಾಗಿದ್ದು, ೧೨ ವರ್ಷಗಳಿಂದ ಇಲ್ಲಿ ರಾಷ್ಟ್ರಗೀತೆಗೆ ನಿಷೇಧ ಇದೆ ಎಂಬುದನ್ನು ಕೇಳಿ ಆಘಾತಕ್ಕೀಡಾಗಿದ್ದಾರೆ. ಹೀಗಾಗಿ ರಾಜೀನಾಮೆಯನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ರಿತು ತ್ರಿಪಾಠಿ ಹೇಳಿದ್ದಾರೆ. ಅವರೂ ಕೂಡ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಎಂ.ಎ. ಕಾನ್ವೆಂಟ್ ಸ್ಕೂಲ್ನಲ್ಲಿ ನಿರ್ಬಂಧ ಹೇರಲಾಗಿದ್ದು, ಇದೀಗ ಆ ಶಾಲೆಯ ಮುಖ್ಯಸ್ಥ ಜಿಯಾ ಉಲ್ ಹಕ್ನನ್ನು ಬಂಧಿಸಲಾಗಿದೆ.
ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ಶಾಲೆ ನಡೆಸುತ್ತಿರುವ ಆರೋಪ, ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪ ಈತನ ಮೇಲಿದೆ.
ತನ್ನ ಕೃತ್ಯವನ್ನು ಈತ ಒಪ್ಪಿಕೊಂಡಿದ್ದು, ಮುಸ್ಲಿಂ ಪೋಷಕರ ಹಿತಾಸಕ್ತಿಗೆ ಅನುಗುಣವಾಗಿ ರಾಷ್ಟ್ರಗೀತೆಯನ್ನು ನಿರ್ಬಂಧಿಸಲಾಗಿದೆ. ಅದರಲ್ಲಿನ ಭಾರತ ಭಾಗ್ಯ ವಿಧಾತಾ ಎಂಬ ಶಬ್ದ ಭಾರತವನ್ನು ಜಗತ್ತಿನ ದೇವರು ಎಂಬುದಾಗಿ ವಿಶ್ಲೇಷಿಸುತ್ತದೆ. ಆದರೆ ಇಸ್ಲಾಂನಲ್ಲಿ ಅಲ್ಲಾನನ್ನು ಹೊರತುಪಡಿಸಿ ಯಾರನ್ನೂ ದೇವರು ಎನ್ನುವಂತಿಲ್ಲ. ಹೀಗಾಗಿ ರಾಷ್ಟ್ರಗೀತೆಗೆ ನಿಷೇಧ ಹೇರಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಇದೀಗ ಆತನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.