ನವದೆಹಲಿ : ರೈಲು, ರೈಲ್ವೆ ಟ್ರ್ಯಾಕ್ ಮುಂತಾದ ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುವ ಹುಚ್ಚು ಯುವಜನತೆಯಲ್ಲಿ ಹೆಚ್ಚಾಗುತ್ತಿದೆ.
ಈ ಹುಚ್ಚಿಗೆ ಕಡಿವಾಣ ಹಾಕುವ ಸಲುವಾಗಿಯೇ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ 1989 ರ ರೈಲ್ವೆ ಕಾಯ್ದೆಯ ಮೂರು ಸೆಕ್ಷನ್ಗಳನ್ನು ಪ್ರಯೋಗಿಸಲು ಮುಂದಾಗಿದೆ.
ರೈಲ್ವೆ ಟ್ರ್ಯಾಕ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿದರೆ ರೈಲ್ವೆ ಕಾಯ್ದೆಯ 147 ನೇ ಸೆಕ್ಷನ್, ಗೂಡ್ಸ್ ರೈಲಿನ ಸೆಲ್ಫಿ ಕ್ಲಿಕ್ಕಿಸಿದರೆ ಸೆಕ್ಷನ್ 145 ಮತ್ತು 147 ಹಾಗೂ ಓಡುವ ರೈಲಿನಲ್ಲಿ ಅಥವಾ ಅದರ ಸಮೀಪ ನಿಂತು ಸೆಲ್ಫಿ ಕ್ಲಿಕ್ಕಿಸದರೆ ಸೆಕ್ಷನ್ 153 ನ್ನು ಹಾಕಲು ನಿರ್ಧರಿಸಲಾಗಿದೆ. ಇದರನ್ವಯ ತಪ್ಪಿತಸ್ಥರಿಗೆ 5 ವರ್ಷ ಸಜೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಲ್ಫಿ ತೆಗೆಯುವುದರ ವಿರುದ್ಧ 3 ರೀತಿಯ ಪ್ರಕರಣಗಳನ್ನು ಹೂಡಲಾಗುತ್ತದೆ. ರೈಲ್ವೆ ತೆಗೆದುಕೊಂಡ ಅತ್ಯಂತ ಪರಿಣಾಮಕಾರಿ ಯೋಜನೆ ಇದಾಗಿದ್ದು ಸೆಲ್ಫಿ ಹುಚ್ಚಿಗೆ ಕಡಿವಾಣ ಬೀಳಲಿದೆ ಎಂಬ ಭರವಸೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.