ನವದೆಹಲಿ: ಏರ್ಟೆಲ್ ತನ್ನ ‘myPlan Infinity’ ಯೋಜನೆಯಡಿ ರೂ. 1,199ರ ಅನಿಯಮಿತ ವಾಯ್ಸ್ ಕಾಲಿಂಗ್ ಜೊತೆಗೆ ವಿವಿಧ 3G/4G ಡಾಟಾ ಪ್ಲಾನ್ಗಳನ್ನು ನೀಡುವ ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಜಾರಿಗೆ ತರುವುದಾಗಿ ಭಾರ್ತಿ ಏರ್ಟೆಲ್ ಹೇಳಿದೆ.
ಈ ಯೋಜನೆಯಡಿ ಅನಿಯಮಿತ ಸ್ಥಳೀಯ, ಎಸ್ಟಿಡಿ, ರಾಷ್ಟ್ರೀಯ ರೋಮಿಂಗ್ ಉಚಿತ ಕರೆಗಳು, ಪ್ರತಿ ನಿತ್ಯ 100 ಎಸ್ಎಮ್ಎಸ್, 1 GB 3G/4G ಡಾಟಾ, ವೈಂಕ್ (Wynk) ಮ್ಯೂಸಿಕ್ ಮತ್ತು ವೈಂಕ್ ಮೂವೀಸ್ ಉಚಿತ ಸಬ್ಸ್ಕ್ರಿಪ್ಷನ್ ನೀಡಲಿದೆ ಎಂದು ಭಾರ್ತಿ ಏರ್ಟೆಲ್ನ ನಿರ್ದೇಶಕ-ಕಾರ್ಯಾಚರಣೆ (ಭಾರತ &ದಕ್ಷಿಣ ಏಷ್ಯಾ) ಅಜಯ್ ಪುರಿ ಹೇಳಿದ್ದಾರೆ.
ಇದರ ಜೊತೆಗೆ 1,599ರ ಪ್ಲಾನ್ನ ಅನಿಯಮಿತ ಸ್ಥಳೀಯ, ಎಸ್ಟಿಡಿ, ರಾಷ್ಟ್ರೀಯ ರೋಮಿಂಗ್ ಉಚಿತ ಕರೆಗಳು, ಪ್ರತಿ ನಿತ್ಯ 100 ಎಸ್ಎಮ್ಎಸ್, 5 ಜಿಬಿ 3G/4G ಡಾಟಾ, ವೈಂಕ್ (Wynk) ಮ್ಯೂಸಿಕ್ ಮತ್ತು ವೈಂಕ್ ಮೂವೀಸ್ ಉಚಿತ ಸಬ್ಸ್ಕ್ರಿಪ್ಷನ್ ಕೂಡ ನೀಡಲಿದೆ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.