ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಯ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ರಿಯೋದಲ್ಲಿ ನಡೆದ 129ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್ನಲ್ಲಿ ಅವರು ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.
ಮುಂಬಯಿ ಇಂಡಿಯನ್ಸ್ ಐಪಿಎಲ್ ಟೀಮ್ ಒಡತಿಯಾಗಿರುವ ನೀತಾ ಅವರನ್ನು 2016ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ನಾಮನಿರ್ದೇಶನಗೊಳಿಸಲಾಗಿತ್ತು.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರನ್ನು ಸ್ವತಂತ್ರವಾಗಿ ಆಯ್ಕೆ ಮಾಡಲು 2020ರ ಒಲಿಂಪಿಕ್ ಅಜೆಂಡಾದ ಆಧಾರದಲ್ಲಿ ಕೆಲವೊಂದು ಹೊಸ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ.
ನೀತಾ ಅವರಿಗೆ 70 ವರ್ಷವಾಗುವ ತನಕ ಅವರು ಸದಸ್ಯೆಯಾಗಿ ಮುಂದುವರೆಯಲಿದ್ದಾರೆ. ಸರ್ ದರಬ್ಜಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಪ್ರತಿನಿಧಿಯಾಗಿದ್ದರು. ರಾಜ ರಣಧೀರ್ ಸಿಂಗ್ ಅವರು ಹಾಲಿ ಗೌರವ ಸದಸ್ಯರಾಗಿದ್ದಾರೆ.
ಇದೀಗ ನೀತಾ ಅಂಬಾನಿ ಅವರು ಭಾರತದ ಮೊದಲ ಮಹಿಳಾ ಸದಸ್ಯೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.