ನವದೆಹಲಿ: ಕೌಶಲ್ಯ ಅಭಿವೃದ್ಧಿ ನಿರ್ದೇಶನಾಲಯ, ಉದ್ಯೋಗ ಮತ್ತು ಉದ್ಯಮಶೀಲತೆ- ಮಹಾರಾಷ್ಟ್ರ ಸರ್ಕಾರ, ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಶಾಶ್ವತ ಉದ್ಯೋಗ ಆಧಾರದಲ್ಲಿ ಸಲಹೆಗಾರ ಮತ್ತು ಏಜೆಂಟ್ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30ರ ಒಳಗಾಗಿ ಎಲ್ಐಸಿ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಒಟ್ಟು 608 ಹುದ್ದೆಗಳು ಖಾಲಿ ಇದ್ದು, 500 ಸಲಹೆಗಾರರ ಹುದ್ದೆ ಹಾಗೂ 108 ವಿಮಾ ಏಜೆಂಟ್ ಹುದ್ದೆಗಳು ಖಾಲಿ ಇವೆ. ಸಲಹೆಗಾರ ಹುದ್ದೆಗೆ ಗರಿಷ್ಟ 50 ವರ್ಷ ಹಾಗೂ ಏಜೆಂಟ್ ಹುದ್ದೆಗೆ ಗರಿಷ್ಟ 33 ವರ್ಷವಾಗಿದೆ.
ಸಲಹೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಪದವಿ ಹೊಂದಿರಬೇಕು ಹಾಗೂ ಸೇಲ್ಸ್ಮನ್ (ಮಾರ್ಕೆಟಿಂಗ್)ನಲ್ಲಿ ಅನುಭವ ಹೊಂದಿರಬೇಕು.
ವಿಮಾ ಏಜೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಮಧ್ಯಂತರ ಪ್ರಮಾಣಪತ್ರ (Intermediate Certificate) ಜೊತೆ ವಿಮಾ ಏಜೆಂಟ್ ಹುದ್ದೆಯಲ್ಲಿ ಅನುಭವ ಹೊಂದಿರಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.