ನವದೆಹಲಿ : ಅತ್ಯಂತ ಮಹತ್ವದ ಸರಕು ಮತ್ತು ಸೇವಾ ತೆರಿಗೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಸ್ವಾತಂತ್ರ್ಯದ ಬಳಿಕ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಇದೆಂದು ಬಣ್ಣಿಸಲಾಗಿದೆ.
ಒಂದು ದೇಶ-ಒಂದು ತೆರಿಗೆ ನಿಯಮದಡಿ 29 ರಾಜ್ಯಗಳನ್ನು ಏಕ ಮಾರುಕಟ್ಟೆಯಾಗಿ ಪರಿವರ್ತಿಸಲಾಗುತ್ತಿದೆ.
2017 ರ ಏಪ್ರಿಲ್ 1 ರಿಂದ ಜಿಎಸ್ಟಿ ಅನುಷ್ಠಾನಕ್ಕೆ ಬರಲಿದ್ದು ದೇಶದ ಜಿಡಿಪಿ ಪ್ರಗತಿಯನ್ನು ಶೇ. 2 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಜಿಎಸ್ಟಿಯಿಂದ ಉತ್ಪಾದನೆ ಅಗ್ಗವಾಗಲಿದ್ದು, ಇದರಿಂದ ಹಲವಾರು ಉತ್ಪಾದನಾ ಸರಕುಗಳ ಬೆಲೆ ಇಳಿಕೆಯಾಗಲಿದೆ. ಇನ್ನೊಂದೆಡೆ ಸೇವೆ ದುಬಾರಿಯಾಗಲಿದೆ.
ತಜ್ಞರ ಪ್ರಕಾರ ಎಂಟ್ರಿ ಲೆವೆಲ್ ಕಾರು, ದ್ವಿಚಕ್ರ ವಾಹನ, ಎಸ್ಯುವಿ ವಾಹನಗಳ ದರ ಕುಗ್ಗಲಿದೆ.
ಕಾರ್ ಬ್ಯಾಟರಿ, ಸಿಮೆಂಟ್, ಎಲೆಕ್ಟ್ರಿಕ್ ವಸ್ತುಗಳಾದ ಫ್ಯಾನ್, ಲೈಟಿಂಗ್, ವಾಟರ್ ಹೀಟರ್, ಏರ್ಕೂಲರ್ಗಳು ಅಗ್ಗವಾಗಲಿದೆ.
ಇನ್ನೊಂದೆಡೆ ಸಿಗರೇಟಿನ ತೆರಿಗೆ ಹೆಚ್ಚಳವಾಗುವ ಕಾರಣ ಅದು ದುಬಾರಿಯಾಗಲಿದೆ. ಮೊಬೈಲ್ ಫೋನ್, ಟೆಕ್ಸ್ಟೈಲ್, ಬ್ರಾಂಡೆಡ್ ಜ್ಯುವೆಲ್ಲರಿಗಳು ದುಬಾರಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.