ಚೆನ್ನೈ : ಅಮೇರಿಕಾದ ಪ್ರಮುಖ ಪಕ್ಷವೊಂದರ ಮೊದಲ ಮಹಿಳಾ ಅಧ್ಯಕ್ಷೀಯ ಅಭ್ಯರ್ಥಿಯಾಗುವುದಕ್ಕೆ ಹಿಲರಿ ಕ್ಲಿಂಟನ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರೇ ಸ್ಫೂರ್ತಿ ಎನ್ನುವ ಮೂಲಕ ಎಐಎಡಿಎಂಕೆ ಶಾಸಕ ತನ್ನ ಅಮ್ಮನ ಪರವಾದ ಭಕ್ತಿಯನ್ನು ತೋರ್ಪಡಿಸಿಕೊಂಡಿದ್ದಾನೆ.
ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಕೂನೂರು ಶಾಸಕ ರಾಮು 2011 ರಲ್ಲಿ ಹಿಲರಿ ಕ್ಲಿಂಟನ್ ಅವರು ಅಮ್ಮ ಜಯಲಲಿತಾ ಅವರನ್ನು ಭೇಟಿಯಾಗಿದ್ದರು. ಆ ಬಳಿಕವಷ್ಟೇ ಅವರಿಗೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಸಾಧ್ಯವಾಯಿತು ಎಂದಿದ್ದಾರೆ.
ಈ ಐತಿಹಾಸಿಕ ಭೇಟಿ ಹಿಲರಿ ಅವರಿಗೆ ಅದೃಷ್ಟವಾಗಿ ಪರಿಣಮಿಸಿತು ಎಂದಿದ್ದಾರೆ. ಯುಎಸ್ನಲ್ಲಿ ಮಹಿಳೆಯೊಬ್ಬರು ಅಧ್ಯಕ್ಷೀಯ ಅಭ್ಯರ್ಥಿಯಾದ ಐತಿಹಾಸಿಕ ಬೆಳವಣಿಗೆಗೆ ತಮಿಳುನಾಡು ಕಾರಣವಾಗಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.
ಯುಎಸ್ನಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಸ್ಪರ್ಧಿಸಲು ಅಮ್ಮನೇ ಕಾರಣ ಎಂದಿದ್ದಾರೆ.
ಭೇಟಿಯ ವೇಳೆ ಹಿಲರಿ ಅಮ್ಮನವರ ವ್ಯಕ್ತಿತ್ವ, ಅವರ ಇಂಗ್ಲೀಷ್ ಚಾತುರ್ಯ, ಪ್ರೋತ್ಸಾಹವನ್ನು ಸರಿಯಾಗಿ ಅರ್ಥೈಸಿಕೊಂಡು ಯುಎಸ್ಗೆ ಹಿಂದಿರುಗಿದ್ದರು. ಅದೇ ಪ್ರೇರಣೆಯಿಂದಾಗಿ ಅವರು ಇಂದು ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.