ನವದೆಹಲಿ : ಡೋಪಿಂಗ್ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಭಾರತೀಯ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರಿಗೆ ಕ್ಲೀನ್ ಚಿಟ್ ದೊರೆತಿದೆ.
ಡೋಪಿಂಗ್ ಆರೋಪಕ್ಕೆ ಒಳಗಾಗಿದ್ದ ಅವರು ರಿಯೋ ಒಲಿಂಪಿಕ್ಸ್ನಿಂದ ಹೊರಗುಳಿಯುವ ಸಾಧ್ಯತೆ ಇತ್ತು. ಆದರೀಗ ನ್ಯಾಷನಲ್ ಆಯಂಟಿ ಡೋಪಿಂಗ್ ಏಜೆನ್ಸಿಯ ಶಿಸ್ತು ಪಾಲನಾ ಸಮಿತಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಇದರಿಂದ ರಿಯೋ ಒಲಿಂಪಿಕ್ಸ್ಗೆ ಅವರು ಭಾಗವಹಿಸಲು ಅರ್ಹರಾಗಿದ್ದಾರೆ.
ನನ್ನ ವಿರುದ್ಧ ಪಿತೂರಿ ಮಾಡಿ ಡೋಪಿಂಗ್ ಆರೋಪಕ್ಕೆ ಒಳಪಡಿಸಲಾಗಿದೆ ಎಂದು ನರಸಿಂಗ್ ಯಾದವ್ ಆರೋಪಿಸಿದ್ದರು. ಈ ಆರೋಪವನ್ನು ಶಿಸ್ತು ಪಾಲನಾ ಸಮಿತಿ ಒಪ್ಪಿಕೊಂಡಿದೆ.
ತನ್ನ ಊಟಕ್ಕೆ ಯಾರೋ ಪುಡಿ ತಂದು ಬೆರೆಸಿ ನಾನು ಡೋಪಿಂಗ್ ಟೆಸ್ಟ್ನಲ್ಲಿ ವಿಫಲವಾಗುವಂತೆ ಯಾರೋ ಮಾಡಿದ್ದಾರೆ ಎಂದು ನರಸಿಂಗ್ ಈ ಹಿಂದೆ ಆರೋಪಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.