ಮುಂಬಯಿ: ಸ್ಪೈನ್ ನಿರ್ಮಿತ ಟಾಲ್ಗೋ ರೈಲು ಮೂರನೇ ಹಂತದ ಪರೀಕ್ಷಾರ್ಥವಾಗಿ ದೆಹಲಿಯಿಂದ ಸೋಮವಾರ ಸಂಜೆ 7.55ಕ್ಕೆ ಪ್ರಯಾಣ ಬೆಳೆಸಿದ್ದು, ಮಂಗಳವಾರ 11.30ಕ್ಕೆ ಮುಂಬಯಿ ತಲುಪಲಿದೆ.
ಭಾರತೀಯ ರೈಲ್ವೆ ಮಂಡಳಿ ಹಾಗೂ ಸ್ಪ್ಯಾನಿಷ್ ಅಧಿಕಾರಿಗಳನ್ನೊಳಗೊಂಡ 180 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ರೈಲು ಕೇವಲ 12 ತಾಸುಗಳ ಅವಧಿಯಲ್ಲೇ ದೆಹಲಿ-ಮುಂಬಯಿ ನಡುವಿನ 1,384 ಕಿ.ಮೀ. ಮಾರ್ಗವನ್ನು ಸಂಚರಿಸಲಿದೆ. ಈ ಹಿಂದೆ ರಾಜಧಾನಿ ಎಕ್ಸ್ಪ್ರೆಸ್ ರೈಲು 91 ಕಿ.ಮೀ. ವೇಗದಲ್ಲಿ ಸಂಚರಿಸಿ 16 ತಾಸುಗಳಲ್ಲಿ ದೆಹಲಿ-ಮುಂಬಯಿ ನಡುವೆ ಸಂಚರಿಸುತ್ತಿತ್ತು.
ಭಾರೀ ಮಳೆಯಿಂದಾಗಿ ಗುಜರಾತ್ನ ವಾಪಿ ತಲುಪುತ್ತಿದ್ದಂತೆ ರೈಲಿನ ವೇಗವನ್ನು ಕಡಿಮೆ ಮಾಡಲಾಗಿದ್ದು, ಮುಂಬಯಿಗೆ 10 ಗಂಟೆಗೆ ತಲುಪಬೇಕಿದ್ದ ಟಾಲ್ಗೋ ರೈಲು 11.30ಕ್ಕೆ ತಲುಪಲಿದೆ.
ಮುಂದಿನ 15 ದಿನಗಳ ಕಾಲ ಟಾಲ್ಗೋ ರೈಲು ದೆಹಲಿ-ಮುಂಬಯಿ ನಡುವೆ 130-150 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.