ನವದೆಹಲಿ : ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ಯಾವುದೇ ವ್ಯಕ್ತಿಗಳು ಇನ್ನು ಮುಂದೆ ಆನ್ಲೈನ್ ಮೂಲಕ ಸರ್ಕಾರದ ಫ್ಲಾಗ್ಶಿಫ್ ಯೋಜನೆಗಳಿಗೆ ದೇಣಿಗೆಯನ್ನು ನೀಡಬಹುದಾಗಿದೆ.
ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಇಂದು ಅಧಿಕೃತ ಘೋಷಣೆ ಮಾಡಿದ್ದಾರೆ.
ಇಂಡಿಯಾ ಡೆವಲಪ್ಮೆಂಟ್ ಫೌಂಡೇಶನ್ ಆಫ್ ಓವರ್ಸೀಸ್ ಇಂಡಿಯನ್ಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ವರಾಜ್, ಭಾರತದ ಸಾಮಾಜಿಕ ಅಭಿವೃದ್ಧಿಗಾಗಿ @GivingtoIndia, IDF-OI ನ್ನು ಸ್ಥಾಪಿಸಲಾಗಿದೆ ಎಂದರು.
ತಾವು ಪಡೆದಿರುವುದನ್ನು ಭಾರತಕ್ಕೆ ವಾಪಾಸ್ ನೀಡಿರುವ ಅನಿವಾಸಿ ಭಾರತೀಯರನ್ನು ಸುಷ್ಮಾ ಸನ್ಮಾನಿಸಿದರು.
ಇದೇ ವೇಳೆ ಅವರು ಆನ್ಲೈನ್ ಪೇಮೆಂಟ್ IDF-OI ಬಿಡುಗಡೆಗೊಳಿಸಿದರು.
ಇದರ ಮೂಲಕ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡಿ ಅನಿವಾಸಿ ಭಾರತೀಯರು ಭಾರತ ಸರ್ಕಾರದ ಯೋಜನೆಗಳಿಗೆ ಅನುದಾನವನ್ನು ನೀಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.